ಪಿ.ಡೀಕಯ್ಯ ಮರಣದ ಬಗ್ಗೆ ಅನುಮಾನ: ಇಂದು ಪದ್ಮುಂಜ ಮನೆಗೆ ಭೇಟಿ ನೀಡಲಿರುವ ಅಧಿಕಾರಿಗಳು - Mahanayaka
5:31 AM Wednesday 20 - August 2025

ಪಿ.ಡೀಕಯ್ಯ ಮರಣದ ಬಗ್ಗೆ ಅನುಮಾನ: ಇಂದು ಪದ್ಮುಂಜ ಮನೆಗೆ ಭೇಟಿ ನೀಡಲಿರುವ ಅಧಿಕಾರಿಗಳು

dikayya
18/07/2022


Provided by

ಬೆಳ್ತಂಗಡಿ:  ಹಿರಿಯ ದಲಿತ ಮುಖಂಡ ಪಿ ಡೀಕಯ್ಯ ಅವರ ಮರಣದ  ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಹಿರಿಯ ಅಧಿಕಾರಿಗಳು ಪದ್ಮುಂಜದ ಅವರ ಮನೆಗೆ ಭೇಟಿ ನೀಡಲಿದ್ದಾರೆ.

ಡೀಕಯ್ಯ ಅವರು ಮೆದುಳಿನವರಕ್ತ ಸ್ರಾವದಿಂದ ಮೃತ ಪಟ್ಟರು ಎಂದು ಹೇಳಲಾಗಿತ್ತು ಇದೀಗ ಅವರ ಕುಟುಂಬಸ್ಥರು ಅವರ ಮರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಇಂದು ಪದ್ಮುಂಜಕ್ಕೆ ಭೇಟಿ ನೀಡಲಿದ್ದಾರೆ.

ಪಿ.ಡೀಕಯ್ಯನವರ ಮರಣದ ಬಗ್ಗೆ ಹಲವಾರು ಅನುಮಾನಗಳು ಇವೆ ಎಂಬ ದೂರುಗಳ ಹಿನ್ನಲೆಯಲ್ಲಿ ಇದೀಗ ಘಟನೆಯ ಬಗ್ಗೆ ತನಿಖೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ದೂರುದಾರರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.

ಇಂದು ಪೊಲೀಸ್ ಅಧಿಕಾರಿಗಳು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಲಿದ್ದು ಯಾವ ರೀತಿಯಾಗಿ ತನಿಖೆಗೆ ಮುಂದಾಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಡೀಕಯ್ಯನವರ ನಿಧನವಾಗಿ ವಾರದ ಬಳಿಕ ದೂರು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ