ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ - Mahanayaka
10:43 AM Saturday 23 - August 2025

ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ

padri
20/03/2022


Provided by

ಛತ್ತೀಸ್‌ ಗಢ:  ಅಪರಿಚಿತ ತಂಡವೊಂದು ಕ್ರಿಶ್ಚಿಯನ್ ಪಾದ್ರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಜಾಪುರ ಜಿಲ್ಲೆಯ ಅಂಗಂಪಲ್ಲಿಯಲ್ಲಿ ನಡೆದಿದೆ. ಯಲಂ ಶಂಕರ್ ಎಂಬ ಪಾದ್ರಿಯನ್ನು ಮನೆಗೆ ನುಗ್ಗಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಐವರು ಮುಸುಕುಧಾರಿಗಳ ತಂಡವೊಂದು ಪಾದ್ರಿಯ  ಮನೆಗೆ ನುಗ್ಗಿ ಅಪಹರಿಸಿದ ನಂತರ ಅಮಾನುಷವಾಗಿ ಥಳಿಸಿ ಚಾಕುವಿನಿಂದ ಇರಿದು ಹತ್ಯೆಗೈದು, ಮೃತದೇಹವನ್ನು ಎಸೆದು ಹೋಗಿದ್ದಾರೆ.

50 ವರ್ಷದ ಯಲಂ ಶಂಕರ್ ಅವರು ಅಂಗಂಪಲ್ಲಿಯಲ್ಲಿರುವ ಕ್ರೈಸ್ಟ್ ಮೂವ್‌ ಮೆಂಟ್ ಚರ್ಚ್‌ಗಾಗಿ ಬಸ್ತಾರ್‌ ನಲ್ಲಿ ಹಿರಿಯ ಪಾದ್ರಿಯಾಗಿದ್ದಾರೆ.  ಇವರು ಅಂಗಪಲ್ಲಿ ಗ್ರಾಮದ ಮಾಜಿ ಮುಖ್ಯಸ್ಥರೂ ಆಗಿದ್ದು, ಸ್ಥಳೀಯರಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ.  ಶಂಕರ್ ಅವರ 50 ವರ್ಷದ ಕುಟುಂಬವು ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಒಳಗೊಂಡಿದೆ.  ಈ ಭೀಕರ ಹತ್ಯೆಯು ಆ ಪ್ರದೇಶದ ಕುಟುಂಬ ಮತ್ತು ಕ್ರೈಸ್ತ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದೆ.

ಎರಡು ದಿನಗಳ ಹಿಂದೆ ಹಿಂದೂತ್ವದ ಗುಂಪೊಂದು ಇವರಿಗೆ ಬೆದರಿಕೆ ಹಾಕಿತ್ತು.  ಕ್ರಿಶ್ಚಿಯನ್ ಧರ್ಮವನ್ನು ಹರಡುವುದನ್ನು ಮುಂದುವರೆಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.  ಇದಾದ ಬಳಿಕ ದಾಳಿ ನಡೆದಿರುವುದರಿಂದ ಘಟನೆ ಹಿಂದೆ ಹಿಂದುತ್ವ ಸಂಘಟನೆ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ!

ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್

ಬಿಜೆಪಿಯಿಂದ ‘ದಿ ಕಾಶ್ಮೀರ್ ಫೈಲ್ಸ್ ‘ ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್

ಹಿಜಾಬ್  ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ  ಬೆದರಿಕೆ: ಇಬ್ಬರ ಬಂಧನ

ರಮೇಶ್ ಜಾರಕಿಹೊಳಿ ಮೇಲೆ ಇರುವ ಸಿಡಿ ಪ್ರಕರಣ ಕ್ಲಿಯರ್‌ ಆಗುತ್ತೆ: ಬಾಲಚಂದ್ರ ಜಾರಕಿಹೊಳಿ ವಿಶ್ವಾಸ

ಇತ್ತೀಚಿನ ಸುದ್ದಿ