ನರಿ ಬುದ್ಧಿ ಪ್ರದರ್ಶಿಸಿದ ಪಾಕಿಸ್ತಾನ: ನಾಗರಿಕ ವಿಮಾನವನ್ನು ಗುರಾಣಿಯಾಗಿ ಬಳಸಿದ ಪಾಕ್!
ನವದೆಹಲಿ: ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಮುಚ್ಚದೇ ನಾಗರಿಕ ವಿಮಾನವನ್ನು ಗುರಾಣಿಯಾಗಿ ಬಳಸಿತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಂದು ದೆಹಲಿಯಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಪಾಕಿಸ್ತಾನವು ನಿನ್ನೆ ತನ್ನ ವಾಯು ಪ್ರದೇಶವನ್ನು ಮುಚ್ಚದೇ, ನಾಗರಿಕ ವಿಮಾನಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಆದರೆ ಗುರುವಾರ ಭಾರತೀಯ ನಗರಗಳ ಮೇಲೆ ಟರ್ಕಿಶ್ ನಿರ್ಮಿತ ಡ್ರೋನ್ ಗಳನ್ನು ಹಾರಿಸಿತು ಎಂದು ತಿಳಿಸಿದರು.
ಪಾಕಿಸ್ತಾನ ತನ್ನ ವಾಯು ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರುತ್ತಿದ್ದ ನಾಗರಿಕ ವಿಮಾನವನ್ನು ಗುರಾಣಿಯಾಗಿ ಬಳಸಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಉತ್ತರ ಭಾರತದಾದ್ಯಂತ ಕನಿಷ್ಠ 300—400 ಪಾಕಿಸ್ತಾನಿ ಡ್ರೋನ್ ಗಳು ನಾಗರಿಕ ಕಟ್ಟಡಗಳು, ಮಿಲಿಟರಿ ಸ್ಥಾಪನೆಗಳು ಮತ್ತು ಧಾರ್ಮಿಕ ಕೇಂದ್ರಗಳ ಕಡೆಗೆ ಹಾರಿದ್ದವು. ಭಾರತದ ವಾಯು ರಕ್ಷಣಾ ವ್ಯಾಪ್ತಿಯಲ್ಲಿ ಡ್ರೋನ್ ಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಪಾಕಿಸ್ತಾನ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಕಾನ್ವೆಂಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಮನೆಗಳಿಗೆ ಬಡಿದು ಅವರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ದೇವಾಲಯಗಳು, ಗುರುದ್ವಾರಗಳು, ಕಾನ್ವೆಂಟ್ ಗಳನ್ನು ಗುರಿಯಾಗಿಸಿಕೊಂಡಿರುವುದು ಕೆಳಮಟ್ಟದ ದಾಳಿ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗಾರರಿಗೆ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























