ಪಾಕಿಸ್ತಾನಿ ಪ್ರಜೆಯ ಬಂಧನ: ಇಂಡೋ-ಪಾಕ್ ಗಡಿಯಲ್ಲಿ ಶಂಕಿತನನ್ನು ಬಂಧಿಸಿದ ಬಿಎಸ್ಎಫ್ ಪೊಲೀಸರು

ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಾಜಸ್ಥಾನದ ಗಡಿ ಜಿಲ್ಲೆಯ ಬಾರ್ಮರ್ ನಲ್ಲಿ ಭಾನುವಾರ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತನನ್ನು 21 ವರ್ಷದ ಜಗ್ಸಿ ಕೋಲಿ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಖರೋಡಿ ಜಿಲ್ಲೆಯ ಆಕ್ಲಿ ಗ್ರಾಮದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಸೆಡ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ನಯಾ ತಾಲ್ ಗಡಿ ಪೋಸ್ಟ್ನಿಂದ ಕೋಲಿಯನ್ನು ಬಂಧಿಸಲಾಗಿದೆ.
ಈ ಪ್ರದೇಶದಲ್ಲಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಅಧಿಕಾರಿಗಳು ಅನುಮಾನಾಸ್ಪದ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿದ ನಂತರ ಈ ಬಂಧನ ನಡೆದಿದೆ. ಬಿಎಸ್ಎಫ್ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಅಂತಿಮವಾಗಿ ಸೆಡ್ವಾ ಪ್ರದೇಶದ ಜಡ್ಪಾ ಗ್ರಾಮದಿಂದ ಕೋಲಿಯನ್ನು ಬಂಧಿಸಲು ಕಾರಣವಾಯಿತು. ಆಗಸ್ಟ್ 24 ಮತ್ತು 25 ರ ಮಧ್ಯರಾತ್ರಿ ಕೋಲಿ ಭಾರತೀಯ ಭೂಪ್ರದೇಶವನ್ನು ದಾಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ.
ಈ ಪ್ರಕರಣವನ್ನು ಔಪಚಾರಿಕವಾಗಿ ದಾಖಲಿಸುವ ಮೊದಲು ಬಿಎಸ್ಎಫ್ ನಿಂದ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ ಎಂದು ಚೋಹ್ಟಾನ್‌ನ ಸರ್ಕಲ್ ಆಫೀಸರ್ ಕೃತಿಕಾ ಯಾದವ್ ಆರಂಭದಲ್ಲಿ ಹೇಳಿದ್ರೂ ತದನಂತರ ಬಂಧನವನ್ನು ದೃಢಪಡಿಸಿದ್ದಾರೆ. ಶಂಕಿತನನ್ನು ಸದ್ಯ ಬಿಎಸ್ಎಫ್ ವಿಚಾರಣೆ ನಡೆಸುತ್ತಿದೆ. ಭದ್ರತಾ ಸಂಸ್ಥೆಗಳು ಈ ಕುರಿತು ತನಿಖೆ ನಡೆಸುತ್ತಿವೆ.
ಈ ಘಟನೆಯು ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಭಾರೀ ಬೇಲಿ ಹಾಕಿರುವ ಇಂಡೋ-ಪಾಕ್ ಗಡಿಯನ್ನು ಒಬ್ಬ ವ್ಯಕ್ತಿ ಹೇಗೆ ದಾಟಲು ಸಾಧ್ಯ ಎಂದು ತಜ್ಞರು ಪ್ರಶ್ನಿಸಿದ್ದು, ಭದ್ರತಾ ಕ್ರಮಗಳಲ್ಲಿ ಸಂಭಾವ್ಯ ಲೋಪ ಕಂಡುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth