ಪಕೋಡಾ ಅಂಗಡಿ ಇಟ್ಟ  ರಾಷ್ಟ್ರಮಟ್ಟದ ಕ್ರೀಡಾಪಟು! | ಜೀವನದ ಬಂಡಿ ಸಾಗಿಸಲು ಬಜ್ಜಿ, ಬೋಂಡಾವೇ ಕೊನೆಯ ಆಧಾರ! - Mahanayaka
10:46 PM Wednesday 15 - October 2025

ಪಕೋಡಾ ಅಂಗಡಿ ಇಟ್ಟ  ರಾಷ್ಟ್ರಮಟ್ಟದ ಕ್ರೀಡಾಪಟು! | ಜೀವನದ ಬಂಡಿ ಸಾಗಿಸಲು ಬಜ್ಜಿ, ಬೋಂಡಾವೇ ಕೊನೆಯ ಆಧಾರ!

04/03/2021

ರಾಂಚಿ: ಬಿಲ್ಲುಗಾರಿಕೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವೊಬ್ಬರು ತಮ್ಮ ಜೀವನದ ಬಂಡಿ ಸಾಗಿಸಲು ಬಜ್ಜಿ, ಬೋಂಡಾದ ಅಂಗಡಿ ಇಟ್ಟ ಘಟನೆ ನಡೆದಿದೆ.


Provided by

23 ವರ್ಷ ವಯಸ್ಸಿನ ಪ್ರತಿಭಾನ್ವಿತ ಯುವತಿ ಮಮತಾ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಅವರು ಆಗಮಿಸಿದ್ದರು. ಈ ನಡುವೆ ಇಡೀ ದೇಶದಲ್ಲಿರುವಂತೆಯೇ ಮಮತಾ ಅವರ ಮನೆಯಲ್ಲಿಯೂ ಕೊರೊನಾ ಲಾಕ್ ಡೌನ್ ನ ನಷ್ಟ ಕುಟುಂಬದ ಕತ್ತು ಹಿಸುಕಿತ್ತು.ಕುಟುಂಬದ ಪರಿಸ್ಥಿತಿಯನ್ನು ಸುಧಾರಿಸಲು ಸದ್ಯ ಪಕೋಡಾ ಮಾರುವುದೇ ಕೊನೆಯ ದಾರಿಯಾಗಿದೆ ಎಂದು ಅನ್ನಿಸಿದಾಗ ಅವರು, ಬಜ್ಜಿ, ಬೋಂಡಾದ ಅಂಗಡಿ ಇಟ್ಟಿದ್ದಾರೆ.

2010ರಲ್ಲಿ ಜ್ಯೂನಿಯರ್ ಹಾಗೂ 2014ರಲ್ಲಿ ಸಬ್ ಜ್ಯೂನಿಯರ್ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ಮಮತಾ ಪ್ರತಿಭಾನ್ವಿತರಾಗಿದ್ದಾರೆ.  ಸರ್ಕಾರ ಇವರ ಪರವಾಗಿ ನಿಲ್ಲಬೇಕಿತ್ತು. ಆದರೆ ಅದು ನಡೆಯಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆಯೇ ಇದೀಗ ಮಮತಾ  ಪಕೋಡಾ ಮಾರಾಟ ಮಾಡುವುದು ಕೂಡ ಒಂದು ಉದ್ಯೋಗ ಮತ್ತು ಅದು ಅನಿವಾರ್ಯ ಉದ್ಯೋಗ ಎಂಬಂತೆ ಇದೀಗ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮೈದಾನಗಳಲ್ಲಿ ಆಟವಾಡುವ ಕನಸು ಹೊತ್ತು ಹೋಗಿದ್ದ ಮಮತಾ ಅವರು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇದೀಗ ಬಜ್ಜಿ, ಬೋಂಡಾ ಮಾಡುವ ಅಂಗಡಿಯಲ್ಲಿ ನಿಂತು ತಮ್ಮ ಕನಸ್ಸನ್ನು ಕೈಚೆಲ್ಲುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಎನ್ನುವ ಆಕ್ರೋಶಗಳು ಸದ್ಯ ದೇಶಾದ್ಯಂತ ಕೇಳಿ ಬಂದಿವೆ.

ನಾನು ಬಜ್ಜಿ ಅಂಗಡಿ ನಡೆಸಿಲ್ಲಅಂದ್ರೆ,  ನಮ್ಮ ಕುಟುಂಬ ಹಸಿವಿನಲ್ಲಿ ಕಂಗಡೆಬೇಕಾಗುತ್ತದೆ. ಸರ್ಕಾರ ನಮಗೆ ಏನಾದರೂ ಸಹಕಾರ ನೀಡಿದರೆ ನಮ್ಮ ಕುಟುಂಬಕ್ಕೆ ನೆರವಾಗುತ್ತದೆ. ಇಲ್ಲದಿದ್ದರೆ, ರಾಷ್ಟ್ರಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ನನ್ನ ಕನಸು ಹಾಗೆಯೇ ಉಳಿದು ಬಿಡುತ್ತದೆ ಎಂದು ಮಮತಾ ಹೇಳಿದ್ದಾರೆ.

whatsapp

ಇತ್ತೀಚಿನ ಸುದ್ದಿ