ತನ್ನ ಪಕ್ಷ ಗೆದ್ದ ಖುಷಿಗೆ ದೇವರಿಗೆ ಪ್ರಾಣ ಅರ್ಪಿಸಿದ ಕಾರ್ಯಕರ್ತ! - Mahanayaka
12:56 PM Wednesday 20 - August 2025

ತನ್ನ ಪಕ್ಷ ಗೆದ್ದ ಖುಷಿಗೆ ದೇವರಿಗೆ ಪ್ರಾಣ ಅರ್ಪಿಸಿದ ಕಾರ್ಯಕರ್ತ!

chennai
10/07/2021


Provided by

ಚೆನ್ನೈ:  ಹರಕೆಯನ್ನು ತೀರಿಸಲು ವ್ಯಕ್ತಿಯೋರ್ವ ದೇವಸ್ಥಾನದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ವಿಲಕ್ಷಣ ಘಟನೆಯೊಂದು ವರದಿಯಾಗಿದ್ದು,   ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದೆ.

ತಮಿಳುನಾಡಿನ ಕರೂರು ಜಿಲ್ಲೆಯ ದೇವಸ್ಥಾನವೊಂದರ ಎದುರು 60 ವರ್ಷ ವಯಸ್ಸಿನ ಉಳಗನಾಥನ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವರ್ಷದ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಸ್ಥಳೀಯ ಅಭ್ಯರ್ಥಿ ಸೆಂಥಿಲ್ ಬಾಲಾಜಿ ಗೆದ್ದು, ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಪ್ರಾಣ ತ್ಯಾಗ ಮಾಡುವುದಾಗಿ ವ್ಯಕ್ತಿಯೂ ಹರಕೆ ಹೇಳಿದ್ದ ಎಂದು ಹೇಳಲಾಗಿದೆ.

ಇನ್ನೂ ಆತ್ಮಹತ್ಯೆಗೂ ಮುನ್ನ ದೇವಸ್ಥಾನದ ಕಟ್ಟೆಯಲ್ಲಿ  ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಹರಕೆಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.  ಉಳಗನಾಥನ್ ಸರ್ಕಾರಿ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೆ ನಿವೃತ್ತರಾಗಿದ್ದರು. ಡಿಎಂಕೆ ಪಕ್ಷದ ಅಪ್ಪಟ ಅಭಿಮಾನಿಯಾಗಿದ್ದ ಅವರು, ಪಕ್ಷದ ಸ್ಥಳೀಯ ನಾಯಕ ಸೆಂಥಿಲ್ ಬಾಲಾಜಿ ಪರವಾಗಿ ಪ್ರಚಾರ ಮಾಡಿದ್ದರು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ