ದಿಢೀರ್ ಬೆಳವಣಿಗೆ: ರಾಜೀನಾಮೆ ಪ್ರಕಟಿಸಿದ ಫೆಲೆಸ್ತೀನ್ ಪ್ರಧಾನಿ - Mahanayaka

ದಿಢೀರ್ ಬೆಳವಣಿಗೆ: ರಾಜೀನಾಮೆ ಪ್ರಕಟಿಸಿದ ಫೆಲೆಸ್ತೀನ್ ಪ್ರಧಾನಿ

26/02/2024


Provided by

ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ತನ್ನ್ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ಆಕ್ರಮಣ ಹಾಗೂ ಪಶ್ಚಿಮ ದಂಡೆ ಮತ್ತು ಜೆರುಸಲೇಮ್‌ನಲ್ಲಿ ಪರಿಸ್ಥಿತಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ರಿಗೆ ಸರಕಾರದ ರಾಜೀನಾಮೆಯನ್ನು ಸಲ್ಲಿಸುವುದಾಗಿ ಮುಹಮ್ಮದ್ ಶ್ತಾಯಿಹ್ ತಿಳಿಸಿದ್ದಾರೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ಆಕ್ರಮಣ ಹಾಗೂ ವೆಸ್ಟ್ ಬ್ಯಾಂಕ್ ಮತ್ತು ಜೆರುಸಲೇಮ್‌ನಲ್ಲಿ ಪರಿಸ್ಥಿತಿ ಉಲ್ಬಣ, ಯುದ್ಧದ ನಂತರ ರಾಜಕೀಯ ವ್ಯವಸ್ಥೆಗಳ ಬಗ್ಗೆ ಪ್ಯಾಲೆಸ್ತೀನಿಯಾದವರಲ್ಲಿ ಒಮ್ಮತವನ್ನು ರೂಪಿಸಲು ಅವಕಾಶ ಮಾಡಿಕೊಡಲು ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ಯಾಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ಸೋಮವಾರ ಘೋಷಿಸಿದ್ದಾರೆ.

ಶ್ತಾಯಿಹ್ ರ ರಾಜೀನಾಮೆಯನ್ನು ಅಬ್ಬಾಸ್ ಅವರು ಇನ್ನೂ ಅಂಗೀಕರಿಸಬೇಕು. ಬೇರೆ ಪ್ರಧಾನಿ ನೇಮಕಗೊಳ್ಳುವವರೆಗೆ ಉಸ್ತುವಾರಿಯಾಗಿ ಉಳಿಯಲು ಅವರನ್ನು ಕೇಳಬಹುದು ಎಂದು ವರದಿಗಳು ಉಲ್ಲೇಖಿಸಿದೆ.

2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮುಹಮ್ಮದ್ ಶ್ತಾಯಿಹ್ ಅರ್ಥಶಾಸ್ತ್ರಜ್ಞರು ಕೂಡ ಹೌದು. ಮುಹಮ್ಮದ್ ಶ್ತಾಯಿಹ್ ರಾಜೀನಾಮೆಯನ್ನು ಘೋಷಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಯುದ್ಧ, ನರಮೇಧ ಮತ್ತು ಹಸಿವಿನಿದ ಜನರು ತತ್ತರಿಸಿರುವ ಮಧ್ಯೆ ರಾಜೀನಾಮೆ ನೀಡುವ ನಿರ್ಧಾರವು ಹೊರ ಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ