ಕಳವಾಗಿದ್ದ ಪಂಚಲೋಹದ ಉತ್ಸವ ಮೂರ್ತಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ! - Mahanayaka
1:40 AM Thursday 4 - September 2025

ಕಳವಾಗಿದ್ದ ಪಂಚಲೋಹದ ಉತ್ಸವ ಮೂರ್ತಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ!

uthsava murthy
12/02/2023


Provided by

ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ ಕಳ್ಳತನ ಆಗಿದ್ದ ಪಂಚಲೋಹದ ಉತ್ಸವ ಮೂರ್ತಿ ಉಪೇಕ್ಷಿತ ಸ್ಥಿತಿಯಲ್ಲಿ ದೇವಸ್ಥಾನದ ಆವರಣ ಗೋಡೆಯ ಹೊರಗೆ ಕಾಡು ಪೊದೆಗಳೆಡೆಯಲ್ಲಿ ಪತ್ತೆಯಾಗಿದೆ.

ಸಂಜೆ ಇಲ್ಲಿ ಮಕ್ಕಳು ಫುಟ್ಬಾಲ್‌ ಆಟವಾಡುತ್ತಿದ್ದಾಗ ಪೊದೆಗಳತ್ತ ನೆಗೆದ ಚೆಂಡನ್ನು ಹೆಕ್ಕಲೆಂದು ಹೋದಾಗ ಮೂರ್ತಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ದೇವಸ್ಥಾನ ಸಮಿತಿಯವರು ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದ್ದಾರೆ.

2020 ಆ. 10ರಂದು ಗರ್ಭಗುಡಿಯೊಳಗಿದ್ದ 12 ಕಿ.ಗ್ರಾಂ. ತೂಕದ ಉತ್ಸವ ಮೂರ್ತಿ, ಶಿವಲಿಂಗದಲ್ಲಿದ್ದ ಎರಡು ಜತೆ ಬೆಳ್ಳಿಯ ಮುಕ್ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ ಬಟ್ಟಲು, ರುದ್ರಾಕ್ಷಿ ಮಾಲೆ ಮೊದಲಾದವು ಕಳವಿಗೀಡಾಗಿತ್ತು.

ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದರು. ಈ ಉತ್ಸವ ಮೂರ್ತಿ ಕಳವಿಗೀಡಾದ ಹಿನ್ನೆಲೆಯಲ್ಲಿ ಹೊಸ ಮೂರ್ತಿಯನ್ನು ಸ್ಥಾಪಿಸಿ ಪೂಜೆ ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಈಗ ವರ್ಷಾವಧಿ ಉತ್ಸವ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮೂರ್ತಿ ಪತ್ತೆಯಾಗಿರುವುದು ವಿಶೇಷವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ