ಪಾನಿಪುರಿಗೆ ಶೌಚಾಲಯದ ನೀರು ಬಳಸಿದ ವ್ಯಾಪಾರಿ | ವಿಡಿಯೋ ವೈರಲ್ - Mahanayaka
2:11 AM Thursday 16 - October 2025

ಪಾನಿಪುರಿಗೆ ಶೌಚಾಲಯದ ನೀರು ಬಳಸಿದ ವ್ಯಾಪಾರಿ | ವಿಡಿಯೋ ವೈರಲ್

07/11/2020

ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬ ಮಾಡಿದ ಕೆಲಸ ಇದೀಗ ವ್ಯಾಪಕವಾಗಿ  ವೈರಲ್ ಆಗಿದ್ದು, ಪಾನಿಪುರಿ ಪ್ರಿಯರಿಗೆ  ಪಾನಿಪುರಿ ತಿನ್ನುವ ಸಂದರ್ಭದಲ್ಲಿ ಇದು ನೆನಪಾಗಿ, ಹಿಂಸಿಸುವಂತಾಗಿದೆ.


Provided by

ತಳ್ಳುಗಾಡಿಯಲ್ಲಿ ಪಾನಿಪುರಿ ಮಾರಾಟ ಮಾಡುವ ವ್ಯಾಪಾರಿಯು ಶೌಚಾಲಯಕ್ಕೆ ಬಳಸುವ ನೀರನ್ನು ಪಾನಿಪುರಿ ತಯಾರಿಕೆಗೆ ಬಳಸಿದ್ದು, ಈ ವಿಡಿಯೋವನ್ನು ಗ್ರಾಹಕನೊಬ್ಬ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ.

ಈ ವಿಡಿಯೋ ನೋಡಿ ರೊಚ್ಚಿಗೆದ್ದ ಜನರು ಆತನ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಇಂತಹ ಘಟನೆಗಳು ಹಲವಾರು ಕಡೆಗಳಲ್ಲಿ ಈ ಹಿಂದೆಯೂ ನಡೆದಿದೆ. ಘಟನೆ ನಡೆದಾಗ ಜನರು ಸ್ವಲ್ಪ ದಿನ ಜಾಗೃತರಾಗಿರುತ್ತಾರೆ. ಆ  ಬಳಿಕ ಅದು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ.

ಇತ್ತೀಚಿನ ಸುದ್ದಿ