ಗ್ರಾಹಕನನ್ನು ತಡೆದು, ‘ಪ್ಯಾಂಟ್ ಧರಿಸಿ ಬನ್ನಿ’ ಎಂದು ವಾಪಾಸ್ ಕಳುಹಿಸಿದ ಬ್ಯಾಂಕ್ ಸಿಬ್ಬಂದಿ! - Mahanayaka
10:57 AM Wednesday 20 - August 2025

ಗ್ರಾಹಕನನ್ನು ತಡೆದು, ‘ಪ್ಯಾಂಟ್ ಧರಿಸಿ ಬನ್ನಿ’ ಎಂದು ವಾಪಾಸ್ ಕಳುಹಿಸಿದ ಬ್ಯಾಂಕ್ ಸಿಬ್ಬಂದಿ!

sbi
21/11/2021


Provided by

ಕೋಲ್ಕತಾ: ಬ್ಯಾಂಕಿಗೆ ಬಂದ ಗ್ರಾಹಕರೊಬ್ಬರನ್ನು  ‘ಪ್ಯಾಂಟ್ ಧರಿಸಿಕೊಂಡು ಬನ್ನಿ’ ಎಂದು ಬ್ಯಾಂಕ್ ಸಿಬ್ಬಂದಿ ವಾಪಸ್ ಕಳುಹಿಸಿದ ಘಟನೆ ನಡೆದಿದ್ದು, ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗಿದೆ.

ಆಶಿಶ್ ಎಂಬ ವ್ಯಕ್ತಿ ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮಗೆ ಆಗಿರುವ ಅನುಭವವನ್ನು  ಹಂಚಿಕೊಂಡಿದ್ದು, ನಾನು ಷಾರ್ಟ್ಸ್(ಅರ್ಧ ಪ್ಯಾಂಟ್) ಧರಿಸಿಕೊಂಡು ಕೋಲ್ಕತ್ತಾದ ಎಸ್ ಬಿಐ ಬ್ಯಾಂಕ್ ಶಾಖೆಗೆ ಹೋಗಿದ್ದು, ಈ ವೇಳೆ ಸಿಬ್ಬಂದಿ ನನ್ನನ್ನು ಬ್ಯಾಂಕ್ ನ ಒಳಗೆ ಹೋಗಲು ಬಿಡಲಿಲ್ಲ. ಪ್ಯಾಂಟ್ ಧರಿಸಿ ಬನ್ನಿ ಎಂದು ಅವರು ವಾಪಸ್ ಕಳುಹಿಸಿದರು ಎಂದು ಆಶಿಶ್ ಆರೋಪಿಸಿದ್ದಾರೆ.

ಈ ಟ್ವೀಟ್ ನ್ನು ಎಸ್ ಬಿಐಗೂ ಅವರು ಟ್ಯಾಗ್ ಮಾಡಿದ್ದು, ಈ ಬಗ್ಗೆ ಎಸ್ ಬಿಐ ಆಶಿಶ್ ಅವರಿಗೆ ಪ್ರತಿಕ್ರಿಯೆ ನೀಡಿದೆ. ನಮ್ಮ ಗ್ರಾಹಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನೂ ನಾವು ಜಾರಿ ಮಾಡಿಲ್ಲ. ಅದರ ಬಗ್ಗೆ ಯಾವುದೇ ಅಧಿಕೃತ ನೀತಿ ಪ್ರಕಟಣೆಯನ್ನೂ ನಾವು ಮಾಡಿಲ್ಲ. ಅವರವರ ಆಯ್ಕೆಗೆ ತಕ್ಕಂತೆ, ಸ್ಥಳೀಯವಾಗಿ ಇರುವ ಕೆಲವು ನಿಯಮಗಳ ಅನುಸಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್​​ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್​​ ಕೊಡಿ. ನಾವು ವಿಚಾರಿಸುತ್ತೇವೆ ಎಂದು ಕೇಳಿದೆ.

ಇನ್ನೂ ಈ ಘಟನೆಯನ್ನು ಮುಂದುವರಿಸಲು ಆಶಿಶ್ ಇಷ್ಟ ಪಡದ ಹಿನ್ನೆಲೆಯಲ್ಲಿ ಅವರು, ನನಗೆ ಈ ಬಗ್ಗೆ ಅನುಮಾನ ಇತ್ತು. ಹಾಗಾಗಿ ನನಗಾಗಿರುವ ಅನುಮಾನವನ್ನು ಕೇಳಿದೆ. 2017ರಲ್ಲಿ ಕೂಡ ಪುಣೆಯಲ್ಲಿ ಬರ್ಮೂಡಾ ಧರಿಸಿಬಂದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯಾಗಿತ್ತು. ಹಾಗಾಗಿ ಇಂತಹ ನಿಯಮ ನಿಜವಾಗಿಯೂ ಇದೆಯೇ ಅಂದುಕೊಂಡಿದ್ದೆ ಎಂದು ಅವರು ಹೇಳಿದ್ದು, ಈ ವಿಚಾರವನ್ನು ಮುಂದುವರಿಸಲು ನಾನು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಡು ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಚ್ಚಿ ಹಾಕಿದ ಕಳ್ಳರ ಗ್ಯಾಂಗ್

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಮಹಿಳೆ

ಕೋಲಾರ ಎಪಿಎಂಸಿಯಲ್ಲಿ 1 ಕೆ.ಜಿ.ಗೆ 125 ರೂ.ಗೆ ಮಾರಾಟವಾದ ಟೊಮೆಟೋ

ಹಿಂದೂ ಯುವತಿ, ಮುಸ್ಲಿಮ್ ಯುವಕನ ವಿವಾಹ ಫಿಕ್ಸ್: ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ

ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ

ಆಂಧ್ರಪ್ರದೇಶ:  ಪ್ರವಾಹದ ಪರಿಣಾಮ 25 ಮಂದಿ ಸಾವು, 17ಕ್ಕೂ ಅಧಿಕ ಮಂದಿ ನಾಪತ್ತೆ 20 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರ

ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?

ಇತ್ತೀಚಿನ ಸುದ್ದಿ