ಪರೇಶ್ ಮೇಸ್ತಾ ಪ್ರಕರಣ: ಸಿಬಿಐ ತನಿಖಾ ವರದಿ ಕುರಿತು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ - Mahanayaka
6:06 PM Wednesday 31 - December 2025

ಪರೇಶ್ ಮೇಸ್ತಾ ಪ್ರಕರಣ: ಸಿಬಿಐ ತನಿಖಾ ವರದಿ ಕುರಿತು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

shobha karandlaje
04/10/2022

ಮೈಸೂರು:  ಪರೇಶ್ ಮೇಸ್ತಾ ಪ್ರಕರಣ ಸಂಬಂಧ ‘ಆಕಸ್ಮಿಕ ಸಾವು’ ಎಂಬ ಸಿಬಿಐ ವರದಿ ವಿಚಾರವಾಗಿ ಈ ಪ್ರಕರಣದ ತನಿಖೆಗೆ ಆಗ್ರಹಿಸಿ ನಡೆಸಲಾಗಿದ್ದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಚಿಕ್ಕ ವಯಸ್ಸಿನ ಹುಡುಗನದ್ದು ಆಕಸ್ಮಿಕ ಸಾವು ಎಂಬುವುದು ಅನುಮಾನ” ಎಂದರು.

ಇನ್ನೂ ಬಿಜೆಪಿ ಸರ್ಕಾರದ ಕುರ್ಚಿಗೆ ಪರೇಶ್ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ಜಯಂತಿ ಹೆಸರಿನಲ್ಲಿ ದೇಶದಲ್ಲಿ ಗಲಭೆ ಎಬ್ಬಿಸಿದ್ದು ಸಿದ್ದರಾಮಯ್ಯ. ಮಡಿಕೇರಿಯಲ್ಲಿ ಕುಟ್ಟಪ್ಪ ಸಾವಿಗೆ ಸಿದ್ದರಾಮಯ್ಯ ಕಾರಣ. ಪಿಎಫ್ ಐನವರಿಗೆ ಕುಮ್ಮಕ್ಕು ನೀಡಿ ಸಿದ್ದರಾಮಯ್ಯ ಗಲಭೆಗೆ ಕಾರಣರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ