ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಮಂಗಳೂರಿಗೆ ಆಗಮನ - Mahanayaka
3:01 AM Wednesday 27 - August 2025

ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಮಂಗಳೂರಿಗೆ ಆಗಮನ

the world
14/01/2023


Provided by

ನವಮಂಗಳೂರು ಬಂದರ್‌ ಗೆ ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಆಗಮಿಸಿತು. ದುಬೈನಿಂದ  ಭಾರತಕ್ಕೆ ಮುಂಬೈ, ಗೋವಾ ಮೂಲಕ ಆಗಮಿಸಿರುವ ‘ದಿ ವರ್ಲ್ಡ್’ ಕೊಚ್ಚಿನ್ ಬಂದರಿಗೆ ಹೋಗುವ ಮಾರ್ಗದಲ್ಲಿ ನವಮಂಗಳೂರು ಬಂದರ್‌ ಗೆ ತಲುಪಿತು.

123 ಪ್ರಯಾಣಿಕರು  ಮತ್ತು 280 ಸಿಬ್ಬಂದಿಯನ್ನು ಹೊತ್ತಿರುವ ಹಡಗು ಬರ್ತ್ ಸಂಖ್ಯೆ ನಾಲ್ಕರಲ್ಲಿ ಲಂಗರು ಹಾಕಿದೆ. ಜನವರಿ 15ರಂದು  ನೌಕಾಯಾನವನ್ನು ಮುಂದುವರಿಸಲಿದೆ. ಮಂಗಳೂರಿಗೆ ಆಗಮಿಸಿದ ಹಡಗಿನ ಪ್ರಯಾಣಿಕರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

the world

ಇವರು ಮಂಗಳೂರಿನ ಪ್ರವಾಸಿ ತಾಣಗಳನ್ನು ಸಂದರ್ಶಿಸಲಿದ್ದಾರೆ. ಈ ಖಾಸಗಿ ಹಡಗು 196.35 ಮೀಟರ್ ಉದ್ದ ಮತ್ತು 7.05 ಮೀಟರ್ ಡ್ರಾಫ್ಟ್ ಮತ್ತು ಅದರ ಸಾಗಿಸುವ ಸಾಮರ್ಥ್ಯ ಒಟ್ಟು 43,188 ಟನ್‌ ಗಳಾಗಿವೆ ಎಂದು ಎನ್‌ಎಂಪಿಎ ಪ್ರಕಟನೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ