ಪತಿ ಅಶ್ಲೀಲ ವಿಡಿಯೋ ನೋಡುತ್ತಾನೆ, ಪತ್ನಿಯಿಂದ ವಿಚಿತ್ರ ದೂರು! | ತನಿಖೆಗೆ ಸೂಚನೆ - Mahanayaka
10:16 AM Wednesday 20 - August 2025

ಪತಿ ಅಶ್ಲೀಲ ವಿಡಿಯೋ ನೋಡುತ್ತಾನೆ, ಪತ್ನಿಯಿಂದ ವಿಚಿತ್ರ ದೂರು! | ತನಿಖೆಗೆ ಸೂಚನೆ

mobile video
06/11/2021


Provided by

ಬೆಂಗಳೂರು: ತನ್ನ ಪತಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದು, ಅಶ್ಲೀಲ ವೆಬ್ ಸೈಟ್  ಗಳಲ್ಲಿ ಚಾಟ್ ಮಾಡುವುದು ಮೊದಲಾದ ಕೃತ್ಯ ನಡೆಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ಹೀನಾಯವಾಗಿ ಹಲ್ಲೆ ನಡೆಸುತ್ತಿದ್ದಾನೆ ಎಂದು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ಮಹಿಳೆ ದಾಖಲಿಸಿದ್ದಾರೆ.

ಮಹಿಳೆಯ ದೂರಿನನ್ವಯ ಒಂದನೇ ಎಸಿಎಂಎಂ ಕೋರ್ಟ್‌ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ವೆಬ್‌ ಸೈಟ್‌ನಲ್ಲಿ ಯುವತಿಯರ ಜತೆ ಚಾಟಿಂಗ್‌ ಮಾಡುತ್ತಾನೆ. ಲೈಂಗಿಕ ಕಾರ್ಯಕರ್ತೆಯರ ಜತೆ ಸಂಪರ್ಕ ಹೊಂದಿದ್ದಾನೆ. ಇದರೊಂದಿಗೆ ಮ್ಯಾಟ್ರಿಮೋನಿಯಲ್‌ ವೆಬ್‌ ಸೈಟ್‌ನಲ್ಲಿ ವಿಚ್ಛೇದಿತ ಎಂದು ಪ್ರೊಫೈಲ್‌ ಹಾಕಿಕೊಂಡು ಮಹಿಳೆಯರ ಚಾಟಿಂಗ್‌ ನಡೆಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಲೋಕ್ಯಾಂಟೋ ಆಯಪ್‌, ಟೆಲಿಗ್ರಾಂ ಆಯಪ್‌ನಲ್ಲಿ ಖಾತೆ ತೆರೆದು ಲೈಂಗಿಕ ಕಾರ್ಯಕರ್ತೆಯರ ಜತೆ ಚಾಟಿಂಗ್‌ ಮಾಡುತ್ತಾನೆ. ಅಪರಿಚಿತ ವ್ಯಕ್ತಿಗೆ ಖಾಸಗಿ ಪೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಾನೆ. ಬೇರೆ ಹುಡುಗಿಯರ ಜತೆ ಫ‌್ಪೊಟೋ ತೆಗೆಸಿಕೊಂಡು ದಂಪತಿ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ಮಹಿಳೆಯು ತನ್ನ ಪತಿಯ ಒಂದೊಂದೇ ಲೀಲೆಗಳನ್ನು ದೂರಿನಲ್ಲಿ ಬಿಚ್ಚಿಟ್ಟಿದ್ದಾರೆ.

ಇನ್ನೂ ಪತಿ ವಿರುದ್ಧ ಮಹಿಳೆ ನೀಡಿರುವ ದೂರನ್ನು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿರುವುದರಿಂದ ಮಹಿಳೆ ಕೋರ್ಟ್ ಮೊರೆ ಹೋಗಿದ್ದಾರೆನ್ನಲಾಗಿದೆ. ಇದೀಗ ಕೋರ್ಟ್ ಸೂಚನೆಯ ಮೇರೆಗೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ