ಪತ್ನಿಗೆ ಪ್ರೇರಣೆ ನೀಡಿ ಕೆಎಎಸ್ ಮಾಡಿಸಿದ್ದ ಪತಿ ಕೊರೊನಾಕ್ಕೆ ಬಲಿ - Mahanayaka
5:32 AM Wednesday 20 - August 2025

ಪತ್ನಿಗೆ ಪ್ರೇರಣೆ ನೀಡಿ ಕೆಎಎಸ್ ಮಾಡಿಸಿದ್ದ ಪತಿ ಕೊರೊನಾಕ್ಕೆ ಬಲಿ

seena
27/05/2021


Provided by

ಶಿವಮೊಗ್ಗ: ಪತ್ನಿಯ ಶಿಕ್ಷಣಕ್ಕೆ ಪ್ರೇರಣೆ ನೀಡಿ ಕೆಎಎಸ್ ಓದಿಸಿದ್ದ ಪತಿ ಕೊರೊನಾ ಸೋಂಕಿನಿಂದ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ತನಗೆ ಓದಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ತನ್ನ ಪತ್ನಿಯನ್ನು ಕೆಎಎಸ್ ಓದಿಸಿದ್ದ ವ್ಯಕ್ತಿ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಸೀನಾ ಎನ್ನುವವರು ಮೃತಪಟ್ಟವರಾಗಿದ್ದು, ತಮ್ಮ ಅಕ್ಕನ ಮಗಳು ಅಶ್ವಿನಿಯನ್ನು ವಿವಾಹವಾಗಿದ್ದ ಅವರು,  ತನಗೆ ಓದಲು ಸಾಧ್ಯವಾಗಿಲ್ಲ, ನೀನು ಓದಬೇಕು ಎಂದು ಪತ್ನಿಗೆ ಪ್ರೇರಣೆ ನೀಡಿ ಓದಿಸಿದ್ದರು.

ಪತಿಯ ಬೆಂಬಲ ಪಡೆದ ಅಶ್ವಿನಿ ಕೂಡ ಶ್ರಮವಹಿಸಿ ಓದಿದ್ದು,  ಮದುವೆಯ ಬಳಿಕವೂ ಅಗತ್ಯವಿದ್ದ ತರಬೇತಿ ಪಡೆದು ಪರೀಕ್ಷೆ ಎದುರಿಸಿದ್ದರು. ಆರು ತಿಂಗಳ ಹಿಂದೆಯಷ್ಟೇ ಅಶ್ವಿನಿ  ಬೆಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯನ್ನು ಪಡೆದುಕೊಂಡಿದ್ದರು. ಆದರೆ,  ಕೆಲ ದಿನಗಳ ಹಿಂದೆಯಷ್ಟೇ ಕೊರೊನಾ ಸೋಂಕಿಗೊಳಗಾದ ಸೀನಾ ಅವರು ಕೊವಿಡ್ ಗೆ ಬಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ