ಪತಿವ್ರತೆ ಎಂದು ಸಾಬೀತುಪಡಿಸಲು ಪತ್ನಿಯ ಕೈ ಸುಟ್ಟ ಪತಿ! - Mahanayaka
8:20 PM Wednesday 15 - October 2025

ಪತಿವ್ರತೆ ಎಂದು ಸಾಬೀತುಪಡಿಸಲು ಪತ್ನಿಯ ಕೈ ಸುಟ್ಟ ಪತಿ!

kolara
03/05/2022

ಕೋಲಾರ: ಯುವಕನೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಕೈಗೆ ಕರ್ಪೂರ ಹಚ್ಚಿದ ಘಟನೆ ಕೋಲಾರ ಜಿಲ್ಲೆಯ ವೀರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.


Provided by

ಐದು ದಿನಗಳ ಹಿಂದೆ ಆನಂದ ಎಂಬ ಯುವಕ ತನ್ನ ಪತ್ನಿಯ ಪತಿವ್ರತೆ ಸಾಬೀತುಪಡಿಸಬೇಕೆಂದು ಆಕೆಯ ಕೈಗೆ ಕರ್ಪೂರ ಹಚ್ಚಿದ್ದು ವಿಕೃತಿ ಮೆರೆದಿದ್ದು ಪತ್ನಿಯ ಕೈಗೆ ಗಂಬೀರ ಗಾಯವಾಗಿದೆ.ಈತನ ಕೃತ್ಯದಿಂದ ಭಯಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿರಲಿಲ್ಲ.  ಆದರೆ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ಸಂದೇಶ್ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಪತ್ನಿ ದೂರು ನೀಡಿದ್ದು,ದೂರಿನ್ವಯ ಪ್ರಕರಣ ದಾಖಲಿಸಿರುವ  ಪೊಲೀಸರು ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

14 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಒಬ್ಬ ಮಗನಿದ್ದಾನೆ ಎಂದು ವೇಮಗಲ್ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಜ್ ತಿಳಿಸಿದ್ದಾರೆ.

ಆರೋಪಿಯು ಯಾವಾಗಲೂ ತನ್ನ ಹೆಂಡತಿಯ ಶೀಲವನ್ನು ಅನುಮಾನಿಸುತ್ತಿದ್ದನು. ಘಟನೆಯ ಬಳಿಕ ಆರೋಪಿ ಗ್ರಾಮದಿಂದ  ಪರಾರಿಯಾಗಿದ್ದು, ಶುಕ್ರವಾರ ಮಹಿಳೆಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕ್ಯಾಂಡಲ್ ಹಚ್ಚುವ ವೇಳೆ ಸ್ಕರ್ಟ್‌ ಗೆ ಬೆಂಕಿ ತಗುಲಿ ವಿದ್ಯಾರ್ಥಿನಿ  ಸಾವು

ಅಮಿತ್ ಶಾಗೆ  ಝೀರೋ ಟ್ರಾಫಿಕ್: ಹಾರ್ನ್ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯ ತಲೆಗೆ ಬಿದ್ದ ಸೀಲಿಂಗ್ ಫ್ಯಾನ್!

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ?:  ಏನಿದು ವೈರಲ್ ವಿಡಿಯೋ?

 

ಇತ್ತೀಚಿನ ಸುದ್ದಿ