ಪತ್ನಿ ಮಗುವಿಗೆ ಜನ್ಮ ನೀಡಿದ ಮೂರೇ ದಿನದೊಳಗೆ ರೈಲಿನಡಿಗೆ ತಲೆ ಇಟ್ಟು ಪತಿ ಆತ್ಮಹತ್ಯೆ! - Mahanayaka

ಪತ್ನಿ ಮಗುವಿಗೆ ಜನ್ಮ ನೀಡಿದ ಮೂರೇ ದಿನದೊಳಗೆ ರೈಲಿನಡಿಗೆ ತಲೆ ಇಟ್ಟು ಪತಿ ಆತ್ಮಹತ್ಯೆ!

tumakur news
22/06/2021


Provided by

ತುಮಕೂರು: ಹೆರಿಗೆಯ ಬಳಿಕ ಪತ್ನಿಯು ತನಗೆ ತಿಳಿಸದೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು ಎಂದು ತನ್ನ ಸಂಬಂಧಿಕರ ಜೊತೆಗೆ ಜಗಳ ಮಾಡಿದ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ನಾಗರಾಜ್ ಎಸ್. ಮೃತ ವ್ಯಕ್ತಿಯಾಗಿದ್ದಾರೆ. ಇವರು ಒಂದು ವರ್ಷದ ಹಿಂದೆ ಅರಸೀಕರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೇನಹಳ್ಳಿಯ ಬೇಬಿಕಲಾ ಎಂಬವರನ್ನು ವಿವಾಹವಾಗಿದ್ದರು. ಬಳಿಕ ಅಮ್ಮನಬಾವಿಯಲ್ಲಿ ನೆಲೆಸಿದ್ದರು. ಮೂರು ದಿನಗಳ ಹಿಂದೆ ಬೇಬಿಕಲಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗರಾಜ್ ಪತ್ನಿಯ ಮನೆಯವರ ಜೊತೆಗೆ ಜಗಳ ಮಾಡಿದ್ದಾರೆನ್ನಲಾಗಿದೆ.

ಜಗಳದ ವೇಳೆ ಸಂಬಂಧಿಕರ ಮಾತುಗಳಿಂದ ನೊಂದು ನಾಗರಾಜ್ ಅವರು ಇಲ್ಲಿನ ಅಮ್ಮನಬಾವಿ ಬಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧಿ ರೈಲ್ವೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ