ಪತ್ನಿಯ ಕಣ್ಣಿಗೆ ಮಣ್ಣೆರಚಲು ಮುಂದಾದ ಪತಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ! - Mahanayaka
10:30 AM Wednesday 20 - August 2025

ಪತ್ನಿಯ ಕಣ್ಣಿಗೆ ಮಣ್ಣೆರಚಲು ಮುಂದಾದ ಪತಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ!

passport
11/07/2022


Provided by

ಮುಂಬೈ; ಪತ್ನಿಯಿಂದ ವಿದೇಶ ಪ್ರವಾಸದ ಮಾಹಿತಿಯನ್ನು ಮರೆಮಾಚಲು ಪಾಸ್‌ ಪೋರ್ಟ್‌ನ ಪುಟಗಳನ್ನು ಹರಿದು ಹಾಕಿದ್ದ ಯುವಕನನ್ನು ಬಂಧಿಸಲಾಗಿದೆ.

ತನ್ನ ಪಾಸ್‌ಪೋರ್ಟ್ ಅನ್ನು ನಕಲಿ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಯಾದವ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ಮದುವೆಯ ಮೊದಲು ತನ್ನ ದೀರ್ಘಕಾಲದ ಮಹಿಳಾ ಸ್ನೇಹಿತೆಯನ್ನು ಭೇಟಿಯಾಗಲು 2019 ರಲ್ಲಿ ಥೈಲ್ಯಾಂಡ್‌ ಗೆ ಪ್ರವಾಸ ಮಾಡಿದ್ದ.  ಈ ವಿದೇಶ ಪ್ರವಾಸದ ಮಾಹಿತಿಯನ್ನು ಹರಿದು ಹಾಕಿದ ಆರೋಪದ ಮೇರೆಗೆ ಸಂದರ್ಶಿ ಯಾದವ್ ಈಗ ಆರೆಸ್ಟ್ ಆಗಿದ್ದಾನೆ.

ಕಳೆದ ದಿನ ಮಾಲ್ಡೀವ್ಸ್‌ ಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರ ಪಾಸ್‌ ಪೋರ್ಟ್‌ನಲ್ಲಿ ಕೆಲವು ಪುಟಗಳು ಹರಿದಿರುವುದು ಇಮ್ಮಿಗ್ರೇಶನ್ ಇಲಾಖೆ ಗಮನಕ್ಕೆ ಬಂದಿದೆ.  ಬಳಿಕ ಪೊಲೀಸರು ನಡೆಸಿದ ವಿಚಾರಣೆ ವೇಳೆ ಪತ್ನಿಯಿಂದ ಬಚ್ಚಿಟ್ಟಿದ್ದ ವಿದೇಶಿ ಪ್ರವಾಸ ಬೆಳಕಿಗೆ ಬಂದಿದೆ.  ಈತ ಅಪರಾಧವನ್ನು ಒಪ್ಪಿಕೊಂಡದ್ದು ನಂತರ ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ