ಪತ್ನಿಯ ನಡತೆ ಮೇಲೆ ಸಂಶಯ: ಪತಿಯಿಂದ ಘೋರ ಕೃತ್ಯ
ಹುಬ್ಬಳ್ಳಿ: ಸಂಶಯದ ರೋಗ ಯಾವ ಕುಟುಂಬದಲ್ಲಿರುತ್ತೋ ಆ ಕುಟುಂಬದಲ್ಲಿ ನೆಮ್ಮದಿ ಸಾಧ್ಯವಿಲ್ಲ. ಇಲ್ಲೊಬ್ಬ ಪತಿ ಮಹಾಶಯ ಪತ್ನಿಯ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ, ಆಕೆಯನ್ನು ಹತ್ಯೆಗೈದ ಘಟನೆ ಭಾನುವಾರ ತಾಲ್ಲೂಕಿನ ಕುಸಗಲ್ ಗ್ರಾಮದಲ್ಲಿ ನಡೆದಿದೆ.
ಆರೋಪಿ ಪತಿ ಸೈಫ್ ಅಲಿ ಈಟಿ ಎಂಬಾತನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಹರುನ್ನಿಸಾ ಹತ್ಯೆಯಾದ ಮಹಿಳೆ. ಮೂಲತಃ ಗದುಗಿನವರಾದ ದಂಪತಿ ಕೂಲಿ ಕೆಲಸಕ್ಕಾಗಿ ಎರಡು ವರ್ಷಗಳ ಹಿಂದೆ ಕುಸಗಲ್ ಗ್ರಾಮಕ್ಕೆ ಬಂದು ನೆಲೆಸಿದ್ದರು ಎನ್ನಲಾಗಿದೆ.
ಸೈಫ್ ಅಲಿ ಪತ್ನಿಯ ನಡತೆ ಕುರಿತು ಆಗಾಗ ಸಂಶಯ ವ್ಯಕ್ತಪಡಿಸುತ್ತಿದ್ದ. ಪತ್ನಿ ಯಾರ ಜೊತೆಯಾದರೂ ಮಾತನಾಡಿದರೆ ಅಸಭ್ಯವಾಗಿ ಬೈದು, ಹಲ್ಲೆ ಮಾಡುತ್ತಿದ್ದ. ಭಾನುವಾರವೂ ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ ಎಂದು ಹೇಳಲಾಗಿದೆ.
ಕೋಪಗೊಂಡ ಪತಿ, ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಜೋರಾಗಿ ಕೂಗುತ್ತಿರುವುದನ್ನು ಕೇಳಿ ಅಕ್ಕಪಕ್ಕದವರು ಬಂದು ಕಿಮ್ಸ್‌ಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದೆ ಮೆಹರುನ್ನಿಸಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು:
ಪೋಷಕರೇ ಎಚ್ಚರ!: ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ಮಗುವಿನ ಅಪಹರಣ!
“ರೆಕ್ಕೆಯನ್ನಲ್ಲ, ತಲೆಯನ್ನೇ ತೆಗೆಯುತ್ತೇನೆ” | ನಟ ದರ್ಶನ್ ಗರಂ
ವರ ಇಷ್ಟವಿಲ್ಲ ಎಂದಿದ್ದಕ್ಕೆ ತಂಗಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಅಣ್ಣ!
ಜಾತಿ ಭಯೋತ್ಪಾದಕರ ಅಟ್ಟಹಾಸ: ದಲಿತ ಯುವಕನ ಗುದದ್ವಾರಕ್ಕೆ ಕೋಲು ತುರುಕಿ ಅಮಾನವೀಯ ಹಲ್ಲೆ




























