ಸಾರ್ವಜನಿಕರ ಎದುರೇ ಪತ್ನಿಯನ್ನು 25 ಬಾರಿ ಇರಿದು ಕೊಂದ! - Mahanayaka

ಸಾರ್ವಜನಿಕರ ಎದುರೇ ಪತ್ನಿಯನ್ನು 25 ಬಾರಿ ಇರಿದು ಕೊಂದ!

delhi
11/04/2021

ನವದೆಹಲಿ: ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಪತಿಯು ವಾಯುವ್ಯ ದೆಹಲಿಯ ಬುದ್ಧವಿಹಾರದ ಸಮೀಪ ಪತ್ನಿಯನ್ನು 25 ಬಾರಿ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.


Provided by

ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬುದ್ಧ ಮಂದಿರದ ಬಳಿಯಿಂದ ಅಟ್ಟಾಡಿಸಿ ಮಹಿಳೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಪತಿ ಮಾರುಕಟ್ಟೆಯೊಂದರ ಬಳಿ ಪತ್ನಿಯ ಮೇಲೆ ಮನಸೋ ಇಚ್ಛೆ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಪತಿ ಹರೀಶ್ ತನ್ನ 26 ವರ್ಷ ವಯಸ್ಸಿನ ಪತ್ನಿ ನೀಲುವಿನ ಮೇಲೆ ಈ ಭೀಕರ ದಾಳಿ ನಡೆಸಿದ್ದಾನೆ. ಈ ವೇಳೆ ಸಾರ್ವಜನಿಕರು ಘಟನೆಯನ್ನು ತಡೆಯಲು ಯತ್ನಿಸಿದಾಗ, “ಹತ್ತಿರ ಬರಲು ಪ್ರಯತ್ನಿಸಬೇಡಿ” ಎಂದು ಚಾಕು ತೋರಿಸಿ ಪತಿ ಬೆದರಿಕೆ ಹಾಕಿದ್ದಾರೆ.

ಇತ್ತೀಚಿನ ಸುದ್ದಿ