ಪತ್ನಿಯನ್ನು ಹತ್ಯೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದ ಪತಿ | ಬಳಿಕ ನಡೆದದ್ದೇನು ಗೊತ್ತಾ? - Mahanayaka
4:25 PM Saturday 18 - October 2025

ಪತ್ನಿಯನ್ನು ಹತ್ಯೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದ ಪತಿ | ಬಳಿಕ ನಡೆದದ್ದೇನು ಗೊತ್ತಾ?

15/03/2021

ಹುಬ್ಬಳ್ಳಿ: ಪತ್ನಿಯನ್ನು ನೇಣಿಗೆ ಹಾಕಿ ಪತಿಯೋರ್ವ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಹನುಮಂತನಗರ ಬಡಾವಣೆಯ ನಿವಾಸಿಯಾಗಿದ್ದಾನೆ.  ಈತ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.


Provided by

ಕೋಲ್ಕತ್ತಾ ಮೂಲದ ರೇಣುಕ ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. ಹನುಮಂತನಗರ ಬಡಾವಣೆಯ ಮಹಾದೇವಪ್ಪ ಹತ್ಯೆ ನಡೆಸಿದ ವ್ಯಕ್ತಿಯಾಗಿದ್ದಾನೆ.  ಈತನಿಗೆ ತನ್ನ ಪತ್ನಿಯ ನಡೆತೆ ಬಗ್ಗೆ ವಿಪರೀತವಾಗಿ ಅನುಮಾನ ಇತ್ತು ಎನ್ನಲಾಗಿದೆ.

ರೇಣುಕ ತನ್ನ ಮೊದಲ ಗಂಡನನ್ನು ತ್ಯಜಿಸಿ ಮಹಾದೇವಪ್ಪನನ್ನು ಕಳೆದ ವರ್ಷ ಮದುವೆಯಾಗಿದ್ದ. ಇಂದು ಬೆಳಗ್ಗೆ ಪತ್ನಿಯನ್ನು ತನ್ನ ಮನೆಯಲ್ಲಿಯೇ ನೇಣಿಗೇರಿಸಿ ಹತ್ಯೆ ಮಾಡಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಾದೇವಪ್ಪ ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಪೊಲೀಸರು ಈತನನ್ನು ವಿಚಾರಣೆ ನಡೆಸಿದಾಗ ಈತ ಸತ್ಯವನ್ನು ಬಹಿರಂಗಪಡಿಸಿದ್ದಾನೆ.

ಇತ್ತೀಚಿನ ಸುದ್ದಿ