ಶಾಂತಿಯುತ ದತ್ತ ಜಯಂತಿ: ಕೊಟ್ಟಿಗೆಹಾರ, ಬಣಕಲ್ ಸಂಪೂರ್ಣ ಅಂಗಡಿ ಮುಂಗಟ್ಟು ಬಂದ್ - Mahanayaka
11:20 PM Thursday 4 - December 2025

ಶಾಂತಿಯುತ ದತ್ತ ಜಯಂತಿ: ಕೊಟ್ಟಿಗೆಹಾರ, ಬಣಕಲ್ ಸಂಪೂರ್ಣ ಅಂಗಡಿ ಮುಂಗಟ್ಟು ಬಂದ್

kottigehara
04/12/2025

ಕೊಟ್ಟಿಗೆಹಾರ:  ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ದತ್ತ ಜಯಂತಿ ಪ್ರಯುಕ್ತ ಬಂದ್ ಮಾಡಲಾಗಿತ್ತು.

ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಚಿಕ್ಕಮಗಳೂರು ದತ್ತ ಜಯಂತಿಗೆ 344 ಕ್ಕೂ ಹೆಚ್ಚು ದತ್ತಮಾಲಾಧಾರಿಗಳ  ವಾಹನಗಳು ಕರಾವಳಿ ಭಾಗದಿಂದ ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದವು.

ದತ್ತ ಪೀಠಕ್ಕೆ ಹೋಗುವ ವಾಹನಗಳಿಗೆ ಸೀರಿಯಲ್ ನಂಬರ್ ಹಾಕಿದ ಪತ್ರಗಳನ್ನು ಪೊಲೀಸರು ಅಂಟಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಎಲ್ಲೆಡೆಯು ಅಂಗಡಿ ಮುಂಗಟ್ಟು ಮುಚ್ಚಿದ್ದರಿಂದ ಶಾಂತಿಯುತವಾಗಿ ದತ್ತ ಜಯಂತಿ ಆಚರಿಸಲಾಯಿತು. ಪೊಲೀಸರು ದತ್ತ ಜಯಂತಿ ಮಾಲಾಧಾರಿಗಳು ಸಾಗುವ ಗಡಿ ಭಾಗದಲ್ಲಿ ಸೂಕ್ತ  ಭದ್ರತೆ ಒದಗಿಸಿದ್ದರು.

ಬಣಕಲ್,ಬಾಳೂರು ಹೊರ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳು ತಪಾಸಣೆಯ ಹೊಣೆ ಹೊತ್ತಿದ್ದರು. ಆಟೋ ರಿಕ್ಷಾ ಚಾಲಕರು ಬಾಡಿಗೆ ಇಲ್ಲದೇ ಪರದಾಡಿದರು. ಬಸ್ ಗಳಲ್ಲೂ ಜನ ಸಂಖ್ಯೆ ವಿರಳವಾಗಿತ್ತು ಇಡೀ ಬಣಕಲ್ ಸುತ್ತಮುತ್ತ  ವ್ಯಾಪಾರ ವ್ಯವಹಾರ ಸ್ಥಗಿತವಾಗಿತ್ತು. ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಗಸ್ತು ತಿರುಗುತ್ತಿರುವ ದೃಶ್ಯ ಕಂಡು ಬಂತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ