ಕಠಿಣ ಭಂಗಿಗಳಲ್ಲಿ ಯೋಗಾಸನ ಮಾಡಿದ ಪೇಜಾವರ ಶ್ರೀ - Mahanayaka
4:16 AM Wednesday 27 - August 2025

ಕಠಿಣ ಭಂಗಿಗಳಲ್ಲಿ ಯೋಗಾಸನ ಮಾಡಿದ ಪೇಜಾವರ ಶ್ರೀ

pejawar shri
21/06/2024


Provided by

ಉಡುಪಿ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತೆಲಂಗಾಣದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕಠಿಣ ಭಂಗಿಗಳಲ್ಲಿ ಯೋಗಾಸನ ಪ್ರದರ್ಶಿಸಿದರು.

ಸದ್ಯ ತೆಲಂಗಾಣ ರಾಜ್ಯ ಪ್ರವಾಸದಲ್ಲಿರುವ  ಪೇಜಾವರ ಶ್ರೀ ಸಿಕಂದರಾಬಾದ್‌ನಲ್ಲಿದ್ದಾರೆ. ಇಂದು ಸಿಕಂದರಾಬಾದ್ ಪೂರ್ಣಬೋಧ ವಿದ್ಯಾಪೀಠ ಮಠದಂಗಳದಲ್ಲಿ ಅವರು ಯೋಗಾಭ್ಯಾಸ ಮಾಡಿದರು.

ನುರಿತ ಯೋಗಪಟುವಾಗಿರುವ ಪೇಜಾವರ ಶ್ರೀ ಪ್ರತಿದಿನ ಬೆಳಿಗ್ಗೆ ವಿವಿಧ ಕಠಿಣ ಯೋಗ ಭಂಗಿಗಳನ್ನು ಅಭ್ಯಾಸ ಮಾಡುತ್ತಾರೆ. ನೂರಕ್ಕಿಂತ ಹೆಚ್ಚಿನ ಆಸನಗಳನ್ನು ಸುಲಲಿತವಾಗಿ ಮಾಡುತ್ತಾರೆ. ಯೋಗ ದಿನಾಚರಣೆಯ ಪ್ರಯುಕ್ತ ಶಿಷ್ಯರ ಜೊತೆ ಹಾಗೂ ನೂರಾರು ಮಂದಿ ಯೋಗಾಸಕ್ತರ ಮುಂದೆ ತಮ್ಮ ಯೋಗಾಸನಗಳನ್ನು ಪ್ರದರ್ಶಿಸಿದರು.


ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ