ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅವಳಿ ಸಹೋದರಿಯರ ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸಹೋದರಿಯರು ಸಮಾನ ಅಂದ್ರೆ ಶೇಕಡಾ 99% ರಷ್ಟು ಅಂಕ ಪಡೆದು ವಿಶೇಷ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಉಮೇಶ್ ಗೌಡ ಪಿ.ಹೆಚ್. ಮತ್ತು ಗೀತಾ ದಂಪತಿ ಅವಳಿ ಮಕ್ಕಳಾದ ಸ್ಪಂದನಾ ಮತ್ತು ಸ್ಪರ್ಷಾ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಇಬ್ಬರೂ 600 ರಲ್ಲಿ 594 ಸಮಾನ (ಶೇಕಡಾ 99%)ಅಂಕ ಪಡೆದಿದ್ದಾರೆ.
ಇವರಿಬ್ಬರು ಎಸ್ ಡಿಎಂ ಕಾಲೇಜು ಉಜಿರೆಯ ವಿದ್ಯಾರ್ಥಿಗಳು. ಇದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ಪ್ರಾಧ್ಯಾಪಕರು ಇಬ್ಬರ ಸಾಧನೆಗೆ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw