ಹೊಟೇಲ್ ನಲ್ಲಿ ಸಭೆ ಸೇರಿ ದಾಳಿ ನಡೆಸಲು ಸಂಚು ಆರೋಪ: ನಿಷೇಧಿತ ಪಿಎಫ್‌ ಐ ಮುಖಂಡರ ಬಂಧನ - Mahanayaka
3:22 AM Wednesday 17 - September 2025

ಹೊಟೇಲ್ ನಲ್ಲಿ ಸಭೆ ಸೇರಿ ದಾಳಿ ನಡೆಸಲು ಸಂಚು ಆರೋಪ: ನಿಷೇಧಿತ ಪಿಎಫ್‌ ಐ ಮುಖಂಡರ ಬಂಧನ

pfi
14/10/2022

ಮಂಗಳೂರು ನಗರದ ಬಂದರ್ ಧಕ್ಕೆಯಲ್ಲಿರುವ ಹೊಟೇಲೊಂದರಲ್ಲಿ ಸಭೆ ಸೇರಿ ದಾಳಿ ನಡೆಸಲು ಸಂಚು ಹೂಡುತ್ತಿದ್ದ ಆರೋಪದಡಿಯಲ್ಲಿ ನಿಷೇಧಿತ ಪಿಎಫ್‌ ಐ ಸಂಘಟನೆಯ ಐವರು ಮುಖಂಡರನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.


Provided by

ಬಂಧಿತರನ್ನು ಜೋಕಟ್ಟೆಯ ಮುಹಮ್ಮದ್ ರಫೀಕ್ ಯಾನೆ ಶಾರ್ಟ್ ರಫೀಕ್, ಕಸಬಾ ಬೆಂಗರೆಯ ಮುಹಮ್ಮದ್ ಬಿಲಾಲ್, ಉಳ್ಳಾಲ ಠಾಣಾ ವ್ಯಾಪ್ತಿಯ ಮುಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯ, ಅಕ್ಬರ್ ಸಿದ್ದೀಕ್ ಅಡ್ಯಾರ್ ಎಂದು ಗುರುತಿಸಲಾಗಿದೆ.

ಈ ಆರೋಪಿಗಳ ವಿರುದ್ಧ ಐಪಿಸಿ ಸೆ.121, 121 ಎ, 109. 153 ಎ ಮತ್ತು ಯುಎಪಿಎ ಕಾಯ್ದೆ 167ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಸಂಘ ಪರಿವಾರದ ಮುಖಂಡರ ಮೇಲೆ, ಕೇಂದ್ರ ಮತ್ತು ರಾಜ್ಯ ಸರಕಾರದ ಕೆಲವು ವ್ಯಕ್ತಿಗಳ ಮೇಲೆ ಹಾಗೂ ಪ್ರತಿಭಟನೆಯ ಹೆಸರಿನಲ್ಲಿ ಸರಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಪಿಎಫ್ ಐ ನಾಯಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 12 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ