ಪ್ರೊ.ಲೋಕೇಶ ರಾಠೋಡ ಅವರಿಗೆ ಪಿ.ಹೆಚ್ ಡಿ ಪದವಿ - Mahanayaka

ಪ್ರೊ.ಲೋಕೇಶ ರಾಠೋಡ ಅವರಿಗೆ ಪಿ.ಹೆಚ್ ಡಿ ಪದವಿ

lokesha rathoda
26/07/2023


Provided by

ಮುಧೋಳ: ಬಾಗಲಕೋಟೆಯ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ, ಶ್ರೀ ಎಸ್. ಆರ್. ಕಂಠಿ ಮಹಾವಿದ್ಯಾಲಯದ ಮುಧೋಳ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಲೋಕೇಶ ರಾಠೋಡ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಪಿ.ಹೆಚ್ ಡಿ ಪದವಿ ನೀಡಿದೆ.

ಡಾ. ಲೋಕೇಶ ರಾಠೋಡ ಅವರಿಗೆ  ದಾವಣಗೆರೆ ವಿಶ್ವವಿದ್ಯಾಲಯ ದಾವಣಗೆರೆಯ ಅರ್ಥಶಾಸ್ತ್ರ ವಿಭಾಗದ  ಸಹ ಪ್ರಾಧ್ಯಾಪಕರು ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಡಾ. ಹುಚ್ಚೇಗೌಡ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆಫ್ ಲೇಬರ್ ಮೈಗ್ರೇಶನ್ ಫ್ರಮ್ ನಾರ್ತ್ ಕರ್ನಾಟಕ ಟು ಗೋವಾ” ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಪಿ.ಹೆಚ್ ಡಿ ಪದವಿ ಲಭಿಸಿದೆ.

ಈ ಸಾಧನೆಗೆ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರು ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ, ಮಹೇಶ.ಎನ್. ಅಥಣಿ, ಸಂಘದ ಕಾಲೇಜು ಆಡಳಿತಗಳ ಮಂಡಳಿಯ ಕಾರ್ಯಾಧ್ಯಕ್ಷರು ಗುರುಬಸವ ಸೂಳಿಭಾವಿ, ಸಂಘದ ಕಾಲೇಜು ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿ ಡಾ. ಎಸ್. ಎನ್.ಗಾಂವಕರ, ಪ್ರಾಚಾರ್ಯರು ಪ್ರೊ. ಬಿ.ಆರ್. ಪಾಟೀಲ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ