ಪಿಕ್‌ ಅಪ್‌ ವಾಹನ ಕಳವು ಪ್ರಕರಣ: ಆರೋಪಿಗಳ ಬಂಧನ - Mahanayaka
1:26 AM Thursday 6 - November 2025

ಪಿಕ್‌ ಅಪ್‌ ವಾಹನ ಕಳವು ಪ್ರಕರಣ: ಆರೋಪಿಗಳ ಬಂಧನ

crime news
15/10/2023

ಪಿಕ್‌ ಅಪ್‌ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣಾ ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 23/09/2023 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ನಡೆದ ಪಿಕ್‌ ಅಪ್‌ ವಾಹನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ನಡೆಸಿ ಕೇರಳ ರಾಜ್ಯದ ರಂಷನ್ @ಸಾನು, ಜುನ್ಸಿಫ್, ನೌಫಲ್,  ಹಂಸಕ್, ತಬ್ರಿಜ,  ಮೊಹಮ್ಮದ್ ಉಸೈನ್,  ಹ್ಯಾರಿಸ್,  ಮೊಹಮ್ಮದ್ ಅಯೂಬ ಖಾನ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇತ್ತೀಚಿನ ಸುದ್ದಿ