ವಿಮಾನ ಅಪಘಾತದ ಭೀಕರತೆಯನ್ನು ತಿಳಿಸಿದ ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ! - Mahanayaka
10:13 PM Friday 12 - December 2025

ವಿಮಾನ ಅಪಘಾತದ ಭೀಕರತೆಯನ್ನು ತಿಳಿಸಿದ ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ !

vishwash kumar ramesh
13/06/2025

ಅಹಮದಾಬಾದ್: 265 ಜನರ ಸಾವಿಗೆ ಕಾರಣವಾದ ಅಹಮದಾಬಾದ್‌ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಬ್ರಿಟಿಷ್ ಪ್ರಜೆ ವಿಶ್ವಶ್ ಕುಮಾರ್ ರಮೇಶ್ ತಾನು ಹೇಗೆ ಈ ಅವಘಡದಲ್ಲಿ ಬದುಕುಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವಶ್ ಕುಮಾರ್ ರಮೇಶ್, ವೈದ್ಯರ ಜೊತೆಗೆ ವಿಮಾನ ಅಪಘಾತದ ಭೀಕರ ಸನ್ನಿವೇಶವನ್ನು ವಿವರಿಸಿದ್ದಾರೆ.

ವಿಮಾನದ ಎಡಭಾಗದಲ್ಲಿರುವ ತುರ್ತು ಬಾಗಿಲಿನ ಪಕ್ಕದಲ್ಲಿ 11A ನಲ್ಲಿ ರಮೇಶ್ ಕುಳಿತಿದ್ದರು. ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿ ಭಾರೀ ಶಬ್ದ ಕೇಳಿಸಿತು. ದೊಡ್ಡ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ವಿಮಾನದಲ್ಲಿರುವ ಸೀಟುಗಳು ಹಾರಿ ಛಿದ್ರವಾಯಿತು ಎಂದು ಅವರು ಹೇಳಿದರು.

ನಾನು ಕುಳಿತಿದ್ದ ಸೀಟು ಕಳಚಿ ಹೋಗಿತು, ಬೆಂಕಿ ಹೊತ್ತಿ ಉರಿಯಲು ಆರಂಭವಾಗಿತ್ತು. ನಾನು ವಿಮಾನದಿಂದ ಜಿಗಿಯಲಿಲ್ಲ, ಆದರೆ ವಿಮಾನ ಛಿದ್ರಗೊಂಡಾಗ ನಾನು ಕುಳಿತಿದ್ದ ಆಸನಕ್ಕೆ ಕಟ್ಟಿಕೊಂಡಿದ್ದ ಪರಿಣಾಮ ಅದರೊಂದಿಗೆ ನಾನು ಹೊರಗೆಸೆಯಲ್ಪಟ್ಟೆ, ಈ ವೇಳೆ ನನಗೆ ಗಾಯಗಳಾಗಿತ್ತು. ನಂತರ ನನ್ನನ್ನು ರಕ್ಷಿಸಲಾಯಿತು ಎಂದು ಅವರು ತಿಳಿಸಿದರು.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಗಾಯಗೊಂಡು ರಕ್ತಸಿಕ್ತರಾಗಿದ್ದ ರಮೇಶ್ ಆಂಬ್ಯುಲೆನ್ಸ್ ಕಡೆಗೆ ಕುಂಟುತ್ತಾ ಬರುತ್ತಿರುವುದು ಕಂಡು ಬಂದಿದೆ.

ಪತನಗೊಂಡಿರುವ ವಿಮಾನವು ಸುಮಾರು 11 ವರ್ಷಗಳಷ್ಟು ಹಳೆಯ ವಿಮಾನವಾಗಿದೆ.  ಏರ್ ಇಂಡಿಯಾ ಪ್ರಕಾರ, ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್, ಏಳು ಪೋರ್ಚುಗೀಸ್ ಮತ್ತು ಒಬ್ಬ ಕೆನಡಿಯನ್ ಇದ್ದರು. ಉಳಿದ 12 ಮಂದಿ ಇಬ್ಬರು ಪೈಲಟ್‌ ಗಳು ಮತ್ತು 10 ಸಿಬ್ಬಂದಿ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ