ಅಕ್ಕಿ ನೀಡದೇ ನಾಟಕ ಆಡುತ್ತಿದ್ದಾರೆ: ಹೆಚ್.ಡಿ.ಕುಮಾಸ್ವಾಮಿ

ಸರ್ಕಾರದವರು ಕೊಟ್ಟ ಮಾತಿನಂತೆ ಅಕ್ಕಿ ನೀಡದೇ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ನಾಟಕವನ್ನು ಜನರು ನೋಡಲೇಬೇಕು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಮತ ಕೊಟ್ಟಿದ್ದಾರೆ. ಇವರ ನಾಟಕ ನೋಡಲೇಬೇಕು. ಇದು ಈಗ ಅನಿವಾರ್ಯತೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನ ಕೊಟ್ಟಿರೋ ತೀರ್ಮಾನದಿಂದ ನಾಡಿನ ಜನರಿಗೆ ಹೇಗೆ ಟೋಪಿ ಹಾಕ್ತಾರೆ ಅನ್ನೋದನ್ನು ಜನರು ನೋಡಲೇಬೇಕು. ಇದನ್ನು ಜನರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ನಿನ್ನೆ ಪ್ರತಿಭಟನೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷರು, ಸಚಿವರು ಅಕ್ಕಿಗಾಗಿ ಪ್ರತಿಭಟನೆ ಮಾಡಿ ಕೇಂದ್ರದ ಮೇಲೆ ದೂಷಣೆ ಮಾಡಿದ್ದಾರೆ. 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಜನರ ಮುಂದೆ ಮಾತು ಕೊಟ್ಟಾಗ ಈ ಸಮಸ್ಯೆ ಬಗ್ಗೆ ಅರಿವು ಇರಲಿಲ್ಲವಾ ಈ ಸರ್ಕಾರಕ್ಕೆ ಎಂದು ಕಿಡಿಕಾರಿದರು.
ಎಫ್ಸಿಐಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಹೇಳ್ತಾರೆ. ರಾಜ್ಯದ ಸಿಎಂ ಹೀಗೆ ಉಡಾಫೆ ಮಾತಾಡೋದು ಎಷ್ಟು ಸರಿ? ಅಕ್ಕಿ ಬೇಕಿದ್ರೆ ಕೇಂದ್ರ ಸಚಿವರನ್ನು ಸಿಎಂ ಅಥವಾ ಸಚಿವರೋ ಭೇಟಿ ಆಗಬೇಕಿತ್ತು. ಯಾವನೋ ಎಫ್ಸಿಐ ಅಧಿಕಾರಿಗೆ ಪತ್ರ ಬರೆದು ಅಕ್ಕಿ ಕೊಡಿ ಅಂತ ಕೇಳಿದ್ರೆ ಅವನಿಗೇನು ಪವರ್ ಇದೆ? ಕೆಲವು ಗೈಡ್ಲೈನ್ಸ್ ಅವರು ಇಟ್ಟುಕೊಂಡಿದ್ದಾರೆ. ಈಗ ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿ ಕೊಡ್ತಿದ್ದಾರೆ. ಇಲ್ಲಿ ಜನರಿಗೆ ಕೊಡ್ತಿರೋದೆ ಆ 5 ಕೆಜಿ. ಕಾಂಗ್ರೆಸ್ ನಾಯಕರು ಒಂದು ವಾರದಿಂದ ಪದೇ ಪದೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ರಾಜ್ಯವನ್ನು ದ್ವೇಷಿಸುತ್ತಿದ್ದಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಕೇವಲ ಕೇಂದ್ರದ ಮೇಲೆ ದೂಷಣೆ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ ಯಾರು ಹೇಳ್ತಿಲ್ಲ ಅಂತ ವಾಗ್ದಾಳಿ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw