ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಮಂಗಳಮುಖಿಯರ ಆಕ್ರೋಶ - Mahanayaka
10:42 AM Saturday 23 - August 2025

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಮಂಗಳಮುಖಿಯರ ಆಕ್ರೋಶ

mangalamukhi
27/04/2021


Provided by

ಮೈಸೂರು:  ರಾಜ್ಯ ಸರ್ಕಾರವು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದರಿಂದ ಅಂಗಡಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಮಂಗಳಮುಖಿಯರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ರಾತ್ರಿ 9ರಿಂದ ಮೇಲೆ 12ರವರೆಗೆ ಕೊರೊನಾ ಕರ್ಫ್ಯೂ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ನಗರಪ್ರದೇಶಗಳು ಸೇರಿದಂತೆ ಇಡೀ ನಗರಗಳಲ್ಲಿ  ಅಂಗಡಿಗಳು ಬಾಗಿಲು ಮುಚ್ಚಲಿವೆ. ಪ್ರತೀ ದಿನ ಅಂಗಡಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಸರ್ಕಾರದ ನಿರ್ಧಾರದಿಂದ ಸಂಕಷ್ಟಕ್ಕೀಡಾಗಿದ್ದು, ಮೈಸೂರಿನಲ್ಲಿ ಈ ಬಗ್ಗೆ ಮಂಗಳಮುಖಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳಮುಖಿಯರ ಜೀವನಕ್ಕೆ ಲಾಕ್ ಡೌನ್ ದೊಡ್ಡ ಹೊಡೆತ ನೀಡಿದೆ. ಫುಟ್ ಪಾತ್ ಗಳಲ್ಲಿ ಇದೀಗ ಮಂಗಳಮುಖಿಯರು ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ನಮ್ಮ ಜೀವನವನ್ನು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಬೀದಿಗೆ ತಂದಿದ್ದಾರೆ ಎಂದು ಮೈಸೂರಿನಲ್ಲಿ ಮಂಗಳಮುಖಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ