ಇ ಬಸ್‌ ಸೇವಾ ಯೋಜನೆಗೆ ಸಿಕ್ತು ಗ್ರೀನ್ ಸಿಗ್ನಲ್: ಯಾವ್ಯಾವ ನಗರಗಳಲ್ಲಿ ಎಷ್ಟು ಬಸ್ ಓಡುತ್ತೆ ಗೊತ್ತಾ..? - Mahanayaka
12:20 AM Tuesday 18 - November 2025

ಇ ಬಸ್‌ ಸೇವಾ ಯೋಜನೆಗೆ ಸಿಕ್ತು ಗ್ರೀನ್ ಸಿಗ್ನಲ್: ಯಾವ್ಯಾವ ನಗರಗಳಲ್ಲಿ ಎಷ್ಟು ಬಸ್ ಓಡುತ್ತೆ ಗೊತ್ತಾ..?

17/08/2023

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಇ-ಬಸ್‌ ಸೇವಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ 10 ಸಾವಿರ ಇಲೆಕ್ಟ್ರಿಕ್‌ ಬಸ್‌ಗಳು ಸಂಚಾರ ನಡೆಸಲಿವೆ.

ಇ -ಬಸ್‌ ಸೇವಾ ಯೋಜನೆಗೆ 57,613 ಕೋಟಿ ಅನುಮೋದಿಸಲಾಗಿದೆ. ಇದರಲ್ಲಿ 20,000 ಕೋಟಿ ಕೇಂದ್ರ ಸರ್ಕಾರ ನೀಡಲಿದ್ದು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ. ಪರಿಸರ ಸ್ನೇಹಿ ಹಾಗೂ ಹವಾಮಾನ ಬದಲಾವಣೆಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು 100 ನಗರಗಳಲ್ಲಿ 10 ಸಾವಿರ ಇ -ಬಸ್‌ಗಳು ಸಂಚಾರ ನಡೆಸಲಿವೆ.

ಈ ಯೋಜನೆ ಮೂರು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಜಾರಿಗೆ ಬರಲಿದ್ದು ಸಂಘಟಿತ ಬಸ್‌ ಸೇವೆ ಹೊಂದಿರದ ನಗರಗಳಿಗೆ ಆದ್ಯತೆ ಮೇರೆಗೆ ಜಾರಿಗೆ ತರಲಾಗುವುದು ಎಂದು ಸುದ್ದಿಘೋಷ್ಠಿಯಲ್ಲಿ ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಈ ಯೋಜನೆಯಿಂದ 45000-55000 ನೇರ ಉದ್ಯೋಗ ಸೃಷ್ಠಿಯಾಗಲಿದೆ. ಜೊತೆಗೆ ಈ ಯೋಜನೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. 10 ವರ್ಷಗಳ ಕಾಲ ಅಂದರೆ 2037ರವರೆಗೆ ಜಾರಿಯಲ್ಲಿ ಇರಲಿದೆ.

ಇತ್ತೀಚಿನ ಸುದ್ದಿ