ಪ್ರಧಾನಿ ಮೋದಿ ಒಬಿಸಿ ವರ್ಗದವರಲ್ಲ: ರಾಹುಲ್ ಗಾಂಧಿ - Mahanayaka

ಪ್ರಧಾನಿ ಮೋದಿ ಒಬಿಸಿ ವರ್ಗದವರಲ್ಲ: ರಾಹುಲ್ ಗಾಂಧಿ

rahul gandhi
08/02/2024


Provided by

ಒಡಿಶಾ: ಪ್ರಧಾನಿ ನರೇಂದ್ರ ಮೋದಿ ಒಬಿಸಿ ವರ್ಗದವರಲ್ಲ, ಆದ್ರೆ ಅವರು ಜನರನ್ನು ಹಾಗೆ ನಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಒಡಿಶಾದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಪ್ರಧಾನಿ ಮೋದಿ ಅವರ ಜಾತಿಯ ಕುರಿತು ಪ್ರಶ್ನೆ ಎತ್ತಿದ್ದಾರೆ.

ಪ್ರಧಾನಿ ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ. ಅವರು ಗುಜರಾತ್ ನಲ್ಲಿ ‘ತೇಲಿ’ ಜಾತಿಯಲ್ಲಿ ಜನಿಸಿದರು. 2000 ರಲ್ಲಿ ತೇಲಿ ಸಮುದಾಯಕ್ಕೆ ಬಿಜೆಪಿಯಿಂದ ಒಬಿಸಿ ಟ್ಯಾಗ್ ನೀಡಲಾಯಿತು. ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿ ನಡೆಸಲು ಬಿಡುವುದಿಲ್ಲ ಎಂದು ರಾಹುಲ್ ಆರೋಪಿಸಿದರು.

ಪ್ರಧಾನಿಯವರು ಒಬಿಸಿ ವರ್ಗದವರೊಂದಿಗೆ ಕೈಕುಲುಕುವುದಿಲ್ಲ, ಆದರೆ ಬಿಲಿಯನೇರ್ ಗಳನ್ನು ತಬ್ಬಿಕೊಳ್ಳುತ್ತಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ