ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಪ್ರಧಾನಿ ಮೋದಿ ಸಂಹಾರ ಮಾಡುತ್ತಾರೆ: ವಿಪಕ್ಷ ನಾಯಕ ಆರ್.ಅಶೋಕ್ ಗುಡುಗು - Mahanayaka
5:34 PM Wednesday 15 - October 2025

ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಪ್ರಧಾನಿ ಮೋದಿ ಸಂಹಾರ ಮಾಡುತ್ತಾರೆ: ವಿಪಕ್ಷ ನಾಯಕ ಆರ್.ಅಶೋಕ್ ಗುಡುಗು

r ashok
19/11/2024

ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ ಅವರು ಮುಂದಿನ ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.


Provided by

ವಕ್ಫ್ ಬೋರ್ಡ್ ವಿರುದ್ಧ ಚಿಕ್ಕಬಳ್ಳಾಪುರ ಬಿಜೆಪಿ ಘಟಕ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ವಕ್ಫ್ ಬೋರ್ಡ್ ಎನ್ನುವುದು ತಿಮಿಂಗಿಲ, ಪಿಶಾಚಿ, ಕೊಳ್ಳಿ ದೆವ್ವ, ರಾಕ್ಷಸ ಇದ್ದ ಹಾಗೆ. ಈ ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಮೋದಿ ಸಂಹಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂ, ಬೌದ್ಧರು, ಕ್ರೈಸ್ತರಿಗೆ ಇಲ್ಲದ ಈ ವಿಶೇಷ ಸ್ಥಾನಮಾನ ಇವರಿಗ್ಯಾಕೆ? ಇವರಿಗೆ ಅಂಬೇಡ್ಕರ್ ಅವರ ಸಂವಿಧಾನ ಅನ್ವಯವಾಗಲ್ವಾ? ಇದು ಕಾಂಗ್ರೆಸ್ ಮನೆಹಾಳು ಬುದ್ಧಿ. ಹಾಗಾಗಿ ಅಧಿವೇಶನದಲ್ಲಿ ನಾವು ಸಹ ವಕ್ಫ್ ಬೋರ್ಡ್ ವಜಾ ಮಾಡಬೇಕು ಎಂದು ಹೋರಾಟ ಮಾಡ್ತೀವಿ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

 

ಇತ್ತೀಚಿನ ಸುದ್ದಿ