ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮ: ಇದ್ದಕ್ಕಿದ್ದಂತೆ ಕೋವಿಡ್ ಸರ್ಟಿಫಿಕೇಟ್ ನಿಂದ ಪ್ರಧಾನಿ ಫೋಟೋ ಮಾಯ..! - Mahanayaka

ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮ: ಇದ್ದಕ್ಕಿದ್ದಂತೆ ಕೋವಿಡ್ ಸರ್ಟಿಫಿಕೇಟ್ ನಿಂದ ಪ್ರಧಾನಿ ಫೋಟೋ ಮಾಯ..!

02/05/2024


Provided by

ಕೋವಿಶೀಲ್ಡ್ ವ್ಯಾಕ್ಸಿನ್ ನಿಂದ ಗಂಭೀರ ಅಡ್ಡ ಪರಿಣಾಮವಾಗುವುದಕ್ಕೆ ಅವಕಾಶ ಇದೆ ಎಂದು ಕಂಪೆನಿ ಒಪ್ಪಿಕೊಂಡ ಬೆನ್ನಿಗೆ ಕೊರೋನಾ ಸರ್ಟಿಫಿಕೇಟ್ ನಿಂದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆರವುಗೊಳಿಸಲಾಗಿದೆ. ಈಗ ವೆಬ್ ಸೈಟ್ ನಿಂದ ನೀವು ಕೊರೋನಾ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡೋ ಹೊರಟರೆ, ಅದರಲ್ಲಿ ಪ್ರಧಾನಿಯ ಚಿತ್ರವಿಲ್ಲದ ಸರ್ಟಿಫಿಕೇಟ್ ಲಭಿಸುತ್ತಿದೆ.

ಒಗ್ಗಟ್ಟಿನಿಂದ ಭಾರತ ಕೋರೋಣವನ್ನು ಪರಾಜಗೊಳಿಸಲಿದೆ ಎಂಬ ಪ್ರಧಾನಿಯವರು ಹೇಳಿಕೆ ಮಾತ್ರ ಇದೀಗ ಸರ್ಟಿಫಿಕೇಟ್ನಲ್ಲಿದೆ.. ಈ ಮೊದಲು ಈ ಹೇಳಿಕೆಯ ಜೊತೆಗೆ ಪ್ರಧಾನಿಯವರ ಚಿತ್ರ ಸರ್ಟಿಫಿಕೇಟ್ ನಲ್ಲಿ ಪ್ರಕಟವಾಗುತ್ತಿತ್ತು.

ರಕ್ತ ರಕ್ತ ಹೆಪ್ಪುಗಟ್ಟುವಂತಹ ಮತ್ತು ಹೃದಯಘಾತಕ್ಕೆ ಕಾರಣವಾಗುವಂತಹ ಗಂಭೀರ ಅಡ್ಡ ಪರಿಣಾಮಗಳು ಕೊವಿಶೀಲ್ಡ್ ವ್ಯಾಕ್ಸಿನಿಂದ ಉಂಟಾಗಲಿದೆ ಎಂದು ಔಷದ ತಯಾರಕ ಕಂಪನಿ ಆಸ್ಟ್ರೋಜನಿಕ ಲಂಡನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

ಆದರೆ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಾಕ್ಸಿನ್ ಸರ್ಟಿಫಿಕೇಟ್ನಿಂದ ಪ್ರಧಾನಿಯ ಚಿತ್ರವನ್ನು ತೆರವುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಕ್ಸಿನ್‌ನಿಂದಾಗಿ ಉಂಟಾಗಿರುವ ಅಡ್ಡ ಪರಿಣಾಮಗಳ ಕುರಿತು ಹಲವು ಮಂದಿ ಲಂಡನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾವಿಗೆ ತುತ್ತಾದ ಮತ್ತು ಗಂಭೀರ ಆರೋಗ್ಯ ಪರಿಣಾಮವನ್ನು ಎದುರಿಸಿದ ವರ ಪೈಕಿ 51 ಮಂದಿ ಲಂಡನ್ ಕೋರ್ಟ್ ನಲ್ಲಿ ದಾವೇ ಹೂಡಿದ್ದು 100 ದಶಲಕ್ಷ ಪೌಂಡ್ ಪರಿಹಾರವನ್ನು ಕೇಳಿದ್ದಾರೆ. ಈ ಬೆಳವಣಿಗೆಯ ಬೆನ್ನಿಗೆ ಸರ್ಟಿಫಿಕೇಟ್ ನಿಂದ ಮೋದಿ ಅವರ ಚಿತ್ರವನ್ನು ತೆರವುಗೊಳಿಸಲಾದ ಘಟನೆ ನಡೆದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ