ಆಡು ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಚ್ಚಿ ಹಾಕಿದ ಕಳ್ಳರ ಗ್ಯಾಂಗ್ - Mahanayaka
11:03 AM Wednesday 20 - August 2025

ಆಡು ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಚ್ಚಿ ಹಾಕಿದ ಕಳ್ಳರ ಗ್ಯಾಂಗ್

s i boominathan
21/11/2021


Provided by

ತಿರುಚ್ಚಿ: ಮೇಕೆ ಕಳ್ಳರನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಇಂದು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಗಡಿಭಾಗದ ಕಲಮಾವೂರು ಬಳಿಯಲ್ಲಿ ಬೆಳಗ್ಗೆ ನಡೆದಿದೆ.

ತಿರುಚ್ಚಿ ಜಿಲ್ಲೆಯ ಸರಹದ್ದಿನಲ್ಲಿ ರಾತ್ರಿ ವೇಳೆ ಮೇಕೆಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂಬ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಸ್ ಐ ಭೂಮಿನಾಥನ್ ಅವರ ನೇತೃತದಲ್ಲಿ ಪೊಲೀಸರು ರಾತ್ರಿ ವೇಳೆ ವಿಶೇಷ ತಂಡದೊಂದಿಗೆ  ಪಹರೆ ನಡೆಸುತ್ತಿದ್ದರು.

ಶನಿವಾರ ಬೆಳಗ್ಗಿನ ವೇಳೆ ಆಟೋವೊಂದರಲ್ಲಿ ಆಡುಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ಮಾಹಿತಿಯೊಂದು ಲಭಿಸಿದ ಹಿನ್ನೆಲೆಯಲ್ಲಿ ನವಲಪಟ್ಟು ಠಾಣೆಯ ಭೂಮಿನಾಥನ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಇಲ್ಲಿನ ಪುದುಕೊಟ್ಟೈ ಜಿಲ್ಲೆಯ ಗಡಿಭಾಗದ ಕಲಮಾವೂರು ಬಳಿಯ ಕಣಿವೆಯ ಮೂಕಾಂಬಿಕಾ ಕಾಲೇಜಿನ ಬಳಿ ಆಟೋವನ್ನು ಅಡ್ಡ ಹಾಕಿದ್ದಾರೆ.

ಭೂಮಿನಾಥನ್  ಅವರನ್ನು ನೋಡುತ್ತಿದ್ದಂತೆಯೇ ಕಳ್ಳರ ಗುಂಪು ಸ್ಥಳದಿಂದ ತಪ್ಪಿಸಿಕೊಳ್ಳಲು ಭೂಮಿನಾಥನ್ ಅವರ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದು, ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಐಜಿ, ಡಿಐಜಿ ಹಾಗೂ ಎಸ್ ಪಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಲು 4 ವಿಶೇಷ ಪಡೆಗಳನ್ನು ರಚಿಸಿ, ಶೋಧ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಮಹಿಳೆ

ಹಿಂದೂ ಯುವತಿ, ಮುಸ್ಲಿಮ್ ಯುವಕನ ವಿವಾಹ ಫಿಕ್ಸ್: ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ

ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ

ಒಂದೋ ಜೈಲಿಗಟ್ಟಿ ಇಲ್ಲವೇ, ಹುಚ್ಚಾಸ್ಪತ್ರೆಗೆ ಸೇರಿಸಿ: ಕಂಗನಾ ವಿರುದ್ಧ ಸಿಡಿದೆದ್ದ ಸಿಖ್ಖರು

ಶ್ರೀಕೃಷ್ಣ ಪರಮಾತ್ಮನ ಕೈ ತುಂಡಾಯಿತು ಎಂದು ವಿಗ್ರಹವನ್ನು ಆಸ್ಪತ್ರೆಗೆ ದಾಖಲಿಸಿದ ಅರ್ಚಕ

ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ

ಭಾರೀ ಮಳೆಗೆ 3 ಮಂದಿ ಸಾವು: ಪ್ರವಾಹದ ಪರಿಣಾಮ 30 ಮಂದಿ ನಾಪತ್ತೆ

ಇತ್ತೀಚಿನ ಸುದ್ದಿ