4 ದಿನಗಳಿಂದ ಕಾಡಿನಲ್ಲಿ ಸಿಲುಕಿದ್ದ ವೃದ್ಧನನ್ನು ರಕ್ಷಿಸಿದ ಪೊಲೀಸ್ ಡಾಗ್!
ಚಿಕ್ಕಮಗಳೂರು: ಕಾಫಿನಾಡ ಪೊಲೀಸ್ ಡಾಗ್ ಗೆ ಹ್ಯಾಟ್ಸಾಫ್ ಹೇಳಲೇಬೇಕು..! ಯಾಕಂದ್ರೆ ಕಾಡಿನಲ್ಲಿ ಸಿಲುಕಿದ್ದ ವೈದ್ಯರೊಬ್ಬರನ್ನು ಪೊಲೀಸ್ ಡಾಗ್ ಪತ್ತೆ ಹಚ್ಚಿ ರಕ್ಷಿಸಿದ ಘಟನೆ ಕೊಪ್ಪ ತಾಲೂಕಿನ ಗುಣವಂತೆ ಕಾಡಿನ ಆಳದ ಪ್ರದೇಶದಲ್ಲಿ ನಡೆದಿದೆ.
ವೈದ್ಯ ವೆಂಕಟೇಗೌಡ ರಕ್ಷಿಸಲ್ಪಟ್ಟವರಾಗಿದ್ದಾರೆ. ಇವರು ಮರೆವಿನ ಕಾಯಿಲೆಯನ್ನು ಹೊಂದಿದ್ದರು. ಹೀಗಾಗಿ ನವೆಂಬರ್ 2ರಂದು ವಾಕಿಂಗ್ ಬಂದಿದ್ದರು. ವಾಕಿಂಗ್ ಮಾಡುತ್ತಾ ಕಾಡಿನ ಆಳಕ್ಕೆ ತೆರಳಿದ್ದಾರೆ. ಅವರಿಗೆ ಕಾಡಿನಿಂದ ಹೊರ ಬರಲು ದಾರಿ ತಿಳಿಯದೇ ಕಂಗಾಲಾಗಿದ್ದರು.
ಕಾಡಂಚಿನ ಗುಣವಂತೆ ಗ್ರಾಮದ ಮನೆಯೊಂದರಲ್ಲಿ ಇವರು ನೀರು ಕುಡಿಯಲು ತೆರಳಿದ್ದರು. ಆದರೆ ನಂತರ 4 ದಿನ ಕಾಡಿನಲ್ಲಿ ಸುತ್ತಾಡಿ, ಸುತ್ತಾಡಿ ಹೊರ ಬರಲು ದಾರಿ ಕಾಣದೇ ಕಂಗಾಲಾಗಿದ್ದರು.
ಇತ್ತ ವೆಂಕಟೇಗೌಡ ಅವರ ಮನೆಯವರು ಇವರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅವರ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಕಾಡು, ಮೇಡು, ಹಳ್ಳಿ ಎಲ್ಲಾ ಕಡೆ ಹುಡುಕಾಟ ನಡೆಸಿದ ನಂತರವೂ ಅವರ ಪತ್ತೆ ಸಾಧ್ಯವಾಗದಿದ್ದಾಗ ಎಸ್ಪಿ ವಿಕ್ರಂ ಅವರ ಮಾರ್ಗದರ್ಶನದಂತೆ ಪೊಲೀಸ್ ಡಾಗ್ ಕಾರ್ಯಾಚರಣೆಗೆ ಇಳಿದಿದೆ.
ನಾಪತ್ತೆಯಾಗಿದ್ದ ವೆಂಕಟೇಗೌಡರ ಪಂಚೆಯ ವಾಸನೆ ಹಿಡಿದ ಪೊಲೀಸ್ ಡಾಗ್ 5 ಕಿ.ಮೀ. ದೂರದ ಕಾಡಿನಲ್ಲಿದ್ದ ವೆಂಕಟೇಗೌಡರನ್ನ ಪತ್ತೆ ಮಾಡಿದೆ. ಕೊಪ್ಪ ತಾಲೂಕಿನ ಗುಣವಂತೆ ಕಾಡಿನ ಆಳದ ಪ್ರದೇಶದಲ್ಲಿ ವೃದ್ಧ ವೈದ್ಯ ಪತ್ತೆಯಾಗಿದ್ದಾರೆ. ಅಂತೂ 75 ವರ್ಷ ವಯಸ್ಸಿನ ವೈದ್ಯ ವೃದ್ಧ ವೆಂಕಟೇಗೌಡ 4 ದಿನಗಳ ಅರಣ್ಯವಾಸದ ನಂತರ ಅವರನ್ನು ರಕ್ಷಿಸಲಾಗಿದೆ. ಎಸ್ಪಿ ವಿಕ್ರಂ ಅವರ ಸಮಯ ಪ್ರಜ್ಞೆಯಿಂದಾಗಿ ವೃದ್ಧನ ಜೀವ ಉಳಿದಿದೆ. ಪೊಲೀಸ್ ಡಾಗ್ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























