ಅಟ್ಯಾಕ್: ಬಿಹಾರದಲ್ಲಿ ಪೊಲೀಸರ ಮೇಲೆ ಮದ್ಯ ಕಳ್ಳಸಾಗಣೆದಾರರಿಂದ ಹಲ್ಲೆ: ಓರ್ವ ಪೊಲೀಸ್ ಸಾವು - Mahanayaka

ಅಟ್ಯಾಕ್: ಬಿಹಾರದಲ್ಲಿ ಪೊಲೀಸರ ಮೇಲೆ ಮದ್ಯ ಕಳ್ಳಸಾಗಣೆದಾರರಿಂದ ಹಲ್ಲೆ: ಓರ್ವ ಪೊಲೀಸ್ ಸಾವು

20/12/2023


Provided by

ಬಿಹಾರದ ಬೆಗುಸರಾಯ್‌ನಲ್ಲಿ ಮದ್ಯ ಕಳ್ಳಸಾಗಣೆದಾರರೊಂದಿಗಿನ ಹೋರಾಟದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹೋಮ್ ಗಾರ್ಡ್ ಜವಾನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಅಕ್ರಮ ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ನವಕೋಟಿ ಪೊಲೀಸ್ ಠಾಣೆಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು ಎಂದು ಬೇಗುಸರಾಯ್ ಎಸ್ಪಿ ಯೋಗೇಂದ್ರ ಕುಮಾರ್ ಬಹಿರಂಗಪಡಿಸಿದ್ದಾರೆ.

ಈ ಮಾಹಿತಿಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಇನ್ಸ್ ಪೆಕ್ಟರ್ ಖಮಾಸ್ ಚೌಧರಿ ನೇತೃತ್ವದಲ್ಲಿ ರಾತ್ರಿ 12:30 ಕ್ಕೆ ಮೂವರು ಹೋಮ್ ಗಾರ್ಡ್ ಜವಾನರೊಂದಿಗೆ ರಾತ್ರಿ ಗಸ್ತು ವಾಹನವನ್ನು ಕಳುಹಿಸಲಾಯಿತು.
ಛತೌನಾ ಬುಧಿ ಗಂಡಕ್ ನದಿ ಸೇತುವೆಯ ಬಳಿ ವಾಹನವನ್ನು ತಡೆಹಿಡಿಯಲು ಅವರಿಗೆ ಸೂಚನೆ ನೀಡಲಾಯಿತು.

ಸ್ಥಳಕ್ಕೆ ತಲುಪಿದ ನಂತರ, ಪೊಲೀಸ್ ತಂಡವು ಶಂಕಿತ ಕಾರನ್ನು ಗುರುತಿಸಿತ್ತು. ಆಗ ಎದುರಾಳಿ ತಂಡವು ತಮ್ಮ ವಾಹನವನ್ನು‌ ನುಗ್ಗಿಸಿ ಇನ್ಸ್ ಪೆಕ್ಟರ್ ಖಮಾಸ್ ಚೌಧರಿ ಮೇಲೆ ಹಾಯಿಸಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ಹೋಮ್ ಗಾರ್ಡ್ ಜವಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹೇಯ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲು ಮತ್ತು ದುಷ್ಕರ್ಮಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ವಾಹನದ ಮಾಲೀಕರನ್ನು ಈಗಾಗಲೇ ಬಂಧಿಸಲಾಗಿದ್ದು, ತೀವ್ರ ವಿಚಾರಣೆ ಪ್ರಗತಿಯಲ್ಲಿದೆ ಎಂದು ಬೇಗುಸರಾಯ್ ಎಸ್ಪಿ ದೃಢಪಡಿಸಿದ್ದಾರೆ.

ಇತ್ತೀಚಿನ ಸುದ್ದಿ