ಲಾಕಪ್ ಡೆತ್: ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು! - Mahanayaka
10:29 AM Tuesday 14 - October 2025

ಲಾಕಪ್ ಡೆತ್: ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು!

mysore
29/11/2021

ಮೈಸೂರು:  ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರ ವಶದಲ್ಲಿದ್ದಾಗ ರಾತ್ರಿ ವೇಳೆ ಆರೋಗ್ಯ ಏರುಪೇರಾಗಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸದ್ಯ ಹೇಳಲಾಗಿದೆ.


Provided by

ಇಲ್ಲಿನ ಬ್ಯಾಲಾರು ಹುಂಡಿ ಗ್ರಾಮದ 32 ವರ್ಷ ವಯಸ್ಸಿನ ಸಿದ್ದರಾಜು ಎಂಬವರು ಮೃತಪಟ್ಟವರು ಎಂದು ಹೇಳಲಾಗಿದ್ದು, ವರದಿಗಳ ಪ್ರಕಾರ,  3 ದಿನಗಳ ಹಿಂದೆ ಸಿದ್ದರಾಜು ಅವರ ತಾಯಿಯ ಜೊತೆಗೆ ಸ್ಥಳೀಯ ಮಹಿಳೆ ಮಣಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಈ ಸಂಬಂಧ ಮಣಿ ಬೇರೆ ಗ್ರಾಮದಲ್ಲಿದ್ದ ತನ್ನ ಸಂಬಂಧಿಯನ್ನು ಕರೆಸಿ  ಸಿದ್ದರಾಜು ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಘಟನೆ ಸಂಬಂಧ ಸಿದ್ದರಾಜುನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎನ್ನಲಾಗಿದೆ.

ಪೊಲೀಸರ ವಶದಲ್ಲಿದ್ದ ವೇಳೆ ಸಿದ್ದರಾಜುಗೆ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಸಿದ್ದರಾಜು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯ ವಿಚಾರ ತಿಳಿದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಒಂದು ರಾತ್ರಿ ಠಾಣೆಯಲ್ಲಿದ್ದು, ಮಾರನೇ ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಸಿದ್ದರಾಜು ಪೊಲೀಸ್ ವಶದಲ್ಲಿರುವಾಗಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದು ಲಾಕಪ್ ಡೆತ್ ಎಂದು ಅವರ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳು ಕೂಡ ವಿಭಿನ್ನ ಹೇಳಿಕೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ!

ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ | ಛಲವಾದಿ ನಾರಾಯಣಸ್ವಾಮಿ

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ಸ್ವಂತ ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇದೆಯಾ? | ಸಚಿವ ಸುಧಾಕರ್ ನೀಡಿದ ಖಡಕ್ ಎಚ್ಚರಿಕೆ ಏನು?

ಚಿಕ್ಕಬಳ್ಳಾಪುರದಲ್ಲೊಂದು ವಿಶೇಷ ಮದುವೆ: ಗಮನ ಸೆಳೆದ ವಿಶೇಷ ಜೋಡಿ

ಇತ್ತೀಚಿನ ಸುದ್ದಿ