ಪೊಲೀಸರನ್ನು ಕ್ಯಾರೇ ಮಾಡದೇ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರಾಜಕೀಯ ಜಾತ್ರೆ! - Mahanayaka
10:27 AM Tuesday 20 - January 2026

ಪೊಲೀಸರನ್ನು ಕ್ಯಾರೇ ಮಾಡದೇ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರಾಜಕೀಯ ಜಾತ್ರೆ!

bjp
25/08/2021

ಮಂಡ್ಯ:  ಕೊರೊನಾ ನಿಯಮಗಳನ್ನು ಧಿಕ್ಕರಿಸಿ ಮಂಡ್ಯದಲ್ಲಿ ಬಿಜೆಪಿ ಬೃಹತ್ ರ್ಯಾಲಿ ಮಾಡಿದ್ದು, ಈ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇನ್ನೂ ಈ ಸಂಬಂಧ  ಬಿಜೆಪಿ ಜಿಲ್ಲಾಧ್ಯಕ್ಷಗೆ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್ ನ್ನು ಕ್ಯಾರೇ ಮಾಡದೇ ಬೃಹತ್ ರ್ಯಾಲಿಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ.

ಕೊವಿಡ್ ನಿಯಮಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ ಎಂದು ಮಂಡ್ಯ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷನಿಗೆ ತಿಳಿಸಿದ್ದರೂ, ಪೊಲೀಸರ ಎಚ್ಚರಿಕೆಗೆ ಕ್ಯಾರೇ ಮಾಡದೇ ಬಿಜೆಪಿ ಮುಖಂಡರು ರಾಜ್ಯ ಮಟ್ಟದ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಆಡಳಿತ ಪಕ್ಷದ ಬಿಜೆಪಿಯವರೇ ತಮ್ಮದೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ನಡೆಸುವುದಾದರೆ, ಇವರು ಬೇರೆ ಪಕ್ಷದವರಿಗೆ ಏನು ಉಪದೇಶ ಮಾಡುವ ಅರ್ಹತೆ ಹೊಂದಿದ್ದಾರೆ. ಜನರಿಗೆ ಕೊರೊನಾ ನಿಯಮ ಪಾಲಿಸಿ ಎಂದು ಎಚ್ಚರಿಕೆ ಹಾಕುವ ಇವರು, ತಾವು ಮಾತ್ರ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸಿ, ಪೊಲೀಸರ ಮಾತಿಗೂ ಬೆಲೆ ನೀಡದೇ ನಡೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ, ಜನ ಸಾಮಾನ್ಯರಿಗೆ ಮಾತ್ರವೇ ಕೊವಿಡ್ ಕಾನೂನುಗಳೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಮಹಿಳೆಯರು ಮನೆಯಲ್ಲಿಯೇ ಇರಿ, ಇಲ್ಲವಾದರೆ ಉಗ್ರರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು | ತಾಲಿಬಾನ್ ನಾಯಕ

ಕಾಂಗ್ರೆಸ್ ಭಯೋತ್ಪಾದನೆಯ ಮನಸ್ಥಿತಿಗಳನ್ನು ಪ್ರೋತ್ಸಾಹಿಸುತ್ತದೆ | ಸಚಿವೆ ಶೋಭಾ ಕರಂದ್ಲಾಜೆ

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು

ಇತ್ತೀಚಿನ ಸುದ್ದಿ