ತಾಜ್ ಮಹಲ್ ಹಿಂದೆ ವಿದೇಶಿ ಪ್ರವಾಸಿಗರು ಏನು ಮಾಡಿದ್ದಾರೆ ನೋಡಿ: ವಿಡಿಯೋ ವೈರಲ್ - Mahanayaka

ತಾಜ್ ಮಹಲ್ ಹಿಂದೆ ವಿದೇಶಿ ಪ್ರವಾಸಿಗರು ಏನು ಮಾಡಿದ್ದಾರೆ ನೋಡಿ: ವಿಡಿಯೋ ವೈರಲ್

taj mahal
13/07/2025


Provided by

ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಗೆ ಪ್ರತಿ ದಿನ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವಿದೇಶಿ ಪ್ರವಾಸಿಗರ ದಂಡು ಕೂಡ ಭಾರೀ ಸಂಖ್ಯೆಯಲ್ಲಿ ಇರುತ್ತದೆ. ಆದರೆ ವಿದೇಶಿ ಪ್ರವಾಸಿಗರು  ತಾಜ್ ಮಹಲ್ ಹಿಂದೆ ಮಾಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.

ತಾಜ್ ಮಹಲ್  ಹಿಂದೆ ಸುರಿಯಲಾಗಿರುವ ಕಸದ ರಾಶಿ, ಕೊಳಚೆ ನೀರನ್ನು ಪ್ರವಾಸಿಗರು ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.

ತಾಜ್ ಮಗಲ್ ಹಿಂಬದಿಯಲ್ಲಿರುವ ಕಸದ ರಾಶಿಯಿಂದ ದುರ್ವಾಸನೆ ಬರುತ್ತಿರುವುದಾಗಿ ಪ್ರವಾಸಿಗರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದು, ವಾಕರಿಕೆ ಬರುವಂತೆ ವಿಡಿಯೋದಲ್ಲಿ ವಾಕರಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಬರೇ ವಿದೇಶಿಯರು ಮಾತ್ರವಲ್ಲ ಸ್ವತಃ ಭಾರತೀಯರೇ ಶಾಕ್ ಆಗಿದ್ದಾರೆ.

ಅಂದ ಹಾಗೆ ಪ್ರವಾಸಿಗರು ಉದ್ದೇಶ ಪೂರ್ವಕವಾಗಿ ಈ ವಿಡಿಯೋ ಮಾಡಿಲ್ಲ, ಸುಂದರವಾದ ತಾಜ್ ಮಹಲ್ ನ ಹಿಂಭಾಗ ಹೇಗಿದೆ ಎನ್ನುವುದನ್ನು ನೋಡಲು ಹೋಗಿದ್ದ ವೇಳೆ ಈ ದೃಶ್ಯವನ್ನು ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.  ಭಾರತ  ಶ್ರೇಷ್ಟ ದೇಶ ನಾವು ಆ ದೇಶವನ್ನ ಪ್ರೀತಿಸುತ್ತೇವೆ. ಇಲ್ಲಿನ ಅನೇಕ ಸುಂದರ ಸ್ಥಳಗಳನ್ನು ತೋರಿಸುವುದಾಗಿ ಪ್ರವಾಸಿಗರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಕಸ, ತ್ಯಾಜ್ಯ ವಿಲೇವಾರಿಯ ವಿಚಾರದಲ್ಲಿ ಭಾರತದ ಆಡಳಿತ ವ್ಯವಸ್ಥೆಗಳು ತುಂಬಾ ಹಿಂದೆ ಬಿದ್ದಿವೆ. ಇದರಿಂದಾಗಿ  ಅಂತಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅವಮಾನವಾಗುವುದನ್ನು ತಪ್ಪಿಸಬೇಕಿದೆ. ನಗರಗಳಲ್ಲಿ ತ್ಯಾಜ್ಯಗಳು ಸರ್ವೇ ಸಾಮಾನ್ಯ ವಿಚಾರ ಎಂಬಂತೆ ನಮ್ಮ ದೇಶದಲ್ಲಿ ನೋಡುತ್ತಾರೆ. ಆದ್ರೆ ವಿದೇಶಿಗರು ನಮ್ಮ ನಗರಗಳಲ್ಲಿ ಈ ರೀತಿಯಾಗಿ ವಾಕರಿಕೆ ಬರುತ್ತಿದೆ ಎನ್ನುವುದು ಯಾರಿಗೂ ಹೆಮ್ಮೆ ತರುವ ವಿಚಾರವಲ್ಲ.

ವಿಶ್ವದ 7ನೇ ಅದ್ಭುತ ತಾಜ್ ಮಹಲ್ ನ ಹಿಂದೆ ಕೊಳಚೆ ಇದ್ರೆ, ನಮ್ಮ ಇತಿಹಾಸಕ್ಕೆ ಏನು ಗೌರವ ತಂದುಕೊಟ್ಟಂತಾಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ