ಮತ್ತೊಂದು ಆನ್ ಲೈನ್ ಪ್ರೇಮ ಬಯಲು: ಜಾರ್ಖಂಡ್ ಪ್ರಿಯಕರನನ್ನು ಮದುವೆ ಆಗಲು ಬಂದ ಪೋಲೆಂಡ್ ಮಹಿಳೆ..! - Mahanayaka
1:01 AM Thursday 18 - December 2025

ಮತ್ತೊಂದು ಆನ್ ಲೈನ್ ಪ್ರೇಮ ಬಯಲು: ಜಾರ್ಖಂಡ್ ಪ್ರಿಯಕರನನ್ನು ಮದುವೆ ಆಗಲು ಬಂದ ಪೋಲೆಂಡ್ ಮಹಿಳೆ..!

23/07/2023

ಇತ್ತೀಚಿಗೆ ಪಾಕಿಸ್ತಾನದ ಸೀಮಾ ಹೈದರ್ ಗ್ರೇಟರ್ ನೋಯ್ಡಾಗೆ ಪ್ರಿಯಕರ ಸಚಿನ್ ಮೀನಾರನ್ನು ಮದುವೆ ಆಗಲು ಭಾರತಕ್ಕೆ ಬಂದಿದ್ದಳು. ಇದರ ಬೆನ್ನಲ್ಲೇ ಮತ್ತೊಂದು ಆನ್ ಲೈನ್ ಪ್ರೇಮ ಪ್ರಕರಣ ಬಯಲಿಗೆ ಬಂದಿದೆ.

ಹೌದು. ಪೋಲೆಂಡ್‌ನ 49 ವರ್ಷದ ಮಹಿಳೆಯೊಬ್ಬರು ಜಾರ್ಖಂಡ್‌ನ ತನ್ನ 35 ವರ್ಷದ ಪ್ರಿಯಕರನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾರೆ. 2021ರಲ್ಲಿ ಪೋಲೆಂಡ್‌ನ ಬಾರ್ಬರಾ ಪೋಲಾಕ್​​​(49) ಮತ್ತು ಜಾರ್ಖಂಡ್‌ನ ಶಾದಾಬ್​​​​ ಮಲ್ಲಿಕ್​​​(35) ಇವರಿಬ್ಬರಿಗೆ ಇನ್ಸ್ಟಾಗ್ರಾಮ್​ ಮೂಲಕ ಪರಿಚಯವಾಯಿತು. ವರ್ಷ ಕಳೆದಂತೆ ಪರಿಚಯ ಪ್ರೀತಿಯಾಗಿ ತಿರುಗಿದೆ. ಇದೀಗಾ ಬಾರ್ಬರಾ ಪೋಲಾಕ್ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ 6ವರ್ಷದ ಮಗುವಿನೊಂದಿಗೆ 2027 ರವರೆಗೆ ಮಾನ್ಯವಾಗಿರುವ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ.

ಇದೀಗ ಇವರಿಬ್ಬರು ಸಪ್ತಪದಿ ತುಳಿಯಲು ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಬಾರ್ಬರಾ ಪೋಲಾಕ್​​ಗೆ ಈಗಾಗಲೇ ಮದುವೆಯಾಗಿದ್ದು 6 ವರ್ಷದ ಮಗಳಿದ್ದಾಳೆ. ಆದರೆ ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ ಎಂದು ತಿಳಿದು ಬಂದಿದೆ.

ಬಾರ್ಬರಾ ಮತ್ತು ಶಬಾದ್ ಅವರ ಮದುವೆಗೆ ಗ್ರಾಮದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
‘ನನಗೆ ನನ್ನದೇ ಆದ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ನಾನು ಪೋಲೆಂಡ್‌ನಿಂದ ಬಂದಿದ್ದೇನೆ. ಆದರೆ ನಾನು ಶಾದಾಬ್ ಗಾಗಿ ಭಾರತ ಮತ್ತು ಹಜಾರಿಬಾಗ್‌ಗೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಪರಸ್ಪರ ಮದುವೆಯಾಗಲಿದ್ದೇವೆ. ನನ್ನ ಮಗಳು ಈಗಾಗಲೇ ಶಾದಾಬ್ ಅನ್ನು ‘ಅಪ್ಪ’ ಎಂದು ಕರೆಯಲು ಪ್ರಾರಂಭಿಸಿದ್ದಾಳೆ’ ಎಂದು ಬಾರ್ಬರಾ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ