ಪ್ರತಾಪ್ ಸಿಂಹ ಕೂಡ ಮಹಿಷನ‌ ವಂಶಸ್ಥರು: ಬಿಎಸ್ಪಿ ಮುಖಂಡ ಹ.ರಾ.ಮಹೇಶ್ - Mahanayaka
12:54 PM Saturday 23 - August 2025

ಪ್ರತಾಪ್ ಸಿಂಹ ಕೂಡ ಮಹಿಷನ‌ ವಂಶಸ್ಥರು: ಬಿಎಸ್ಪಿ ಮುಖಂಡ ಹ.ರಾ.ಮಹೇಶ್

hara mahesh
06/10/2023


Provided by

ಚಾಮರಾಜನಗರ: ಪ್ರತಾಪ್ ಸಿಂಹ ಕೂಡ ಮಹಿಷನ‌ ವಂಶಸ್ಥರೇ ಎಂದು ಬಿಎಸ್ ಪಿ ಮುಖಂಡ ಹ.ರಾ.ಮಹೇಶ್ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಪ್ರತಾಪ್ ಸಿಂಹ ಮನುವಾದಿ ಹಿನ್ನೆಲೆಯಿಂದ ಬಂದವರು. ಆದರೆ, ಅವರು ಸಹ ಮಹಿಷನ ವಂಶಸ್ಥರೆ, ಆದ್ರೆ ಬಿಜೆಪಿಯ ಮನುವಾದ, ಬ್ರಾಹ್ಮಣವಾದದೊಳಗೆ ಸಿಲುಕಿದ್ದಾರೆ ಎಂದು ಸಂಸದ ವಿರುದ್ಧ ಕಿಡಿಕಾರಿದರು.

ಪ್ರತಾಪ್ ಸಿಂಹಗೆ ನಿಜವಾದ ಇತಿಹಾಸ ಗೊತ್ತಿಲ್ಲ,ಅದು ಅರಿವಾದರೆ ಮಹಿಷ ದಸರಾಗೆ ಅವರೇ ಮುಂದಾಗುತ್ತಾರೆ, ಮೈಸೂರು ಸಂಸದರಿಗೆ ಇತಿಹಾಸ ಅರ್ಥೈಸುವ ಕೆಲಸ ಮಾಡ್ತೆವೆ ಎಂದು ಟಾಂಗ್ ಕೊಟ್ಟಿದ್ದಾರೆ‌.‌

ಮೈಸೂರು ಶಾಸಕ ಶ್ರೀವತ್ಸ ಅವರು ಯಾವತ್ತು ಬದಲಾಗಲ್ಲ,  ಯಾಕಂದ್ರೆ ಅವರು ಮಹಿಷ ರಾಕ್ಷಸ ಎಂದು ಪ್ರತಿಬಿಂಬಿಸಿದ ಸಮುದಾಯಕ್ಕೆ ಸೇರಿದವರು,  ಹಾಗಾಗಿ ಅವರು ಬದಲಾಗೊದು ಡೌಟ್, ಆದರೆ ಪ್ರತಾಪ್ ಸಿಂಹ ಇವತ್ತಲ್ಲ ನಾಳೆ ಬದಲಾಗ್ತಾರೆ ಎಂದರು.

ಮುಂದಿನ ದಿನಗಳಲ್ಲಿ ಸಂಸದರಿಗೆ ಮಹಿಷನ ಇತಿಹಾಸ ತಿಳಿಸುತ್ತೇವೆ.  ಆ ಮೂಲಕ ಸಂಸದರ ವಿಶ್ವಾಸ ತೆಗೆದುಕೊಂಡು ಮಹಿಷ ದಸರಾ ಆಚರಿಸುತ್ತೇವೆ. ಈಗ ಅವರು ಒಂದು ರಾಜಕೀಯ ಪಕ್ಷದಲ್ಲಿರುವುದರಿಂದ ಅಲ್ಲಿನ ಸಿದ್ದಾಂತ ನಂಬಬೇಕಾಗುತ್ತೆ, ಕೆ.ಎಸ್. ಭಗವಾನರ ಒಕ್ಕಲಿಗರೆಲ್ಲ ಬೌದ್ಧರು ಎಂಬ ಪುಸ್ತಕ ಓದಿದರೆ, ಇತಿಹಾಸ ತಜ್ಞರ ಪುಸ್ತಕ ಓದಿದ್ರೆ ಖಂಡಿತ ಪ್ರತಾಪ್ ಸಿಂಹ ಬದಲಾಗುತ್ತಾರೆ ಎಂದು ಹೇಳಿದರು.

ಮಹಿಷ ದಸರಾ ವಿರೋಧಿಸಲು ಅವರಿಗೆ ಹಕ್ಕಿದೆ, ಅದೇ ರೀತಿ ಆಚರಣೆ ಮಾಡಲು ನಮಗೂ ಹಕ್ಕಿದೆ. ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೀವಿ ಎಂದಿದ್ದಾರೆ.

ಇತ್ತೀಚಿನ ಸುದ್ದಿ