ಬಿಬಿಎಂಪಿಯಿಂದ 2.5 ಲಕ್ಷ ಸಸಿಗಳ ವಿತರಣೆಗೆ ಸಿದ್ಧತೆ

ಬೆಂಗಳೂರು: ಗಾರ್ಡನ್ ಸಿಟಿ, ಗ್ರೀನ್ ಸಿಟಿಯೆಂದು ಹೆಸರು ಪಡೆದಿರುವ ಬೆಂಗಳೂರನ್ನು ಮತ್ತಷ್ಟು ಹಸಿರು ಮಾಡಲು ಬಿಬಿಎಂಪಿ ಮುಂದಾಗಿದೆ.
ನಗರವನ್ನು ಹಸಿರಾಗಿಸಲು ಬಿಬಿಎಂಪಿಯು ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯುಎ) ಮತ್ತು ಲಾಭರಹಿತ ಸಂಸ್ಥೆಗಳು ಸೇರಿದಂತೆ ನಾಗರಿಕರಿಗೆ 2.5 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.
ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಈ ಬಗ್ಗೆ ಮಾತನಾಡಿ, ಈ ಮಳೆಗಾಲದಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. “ಈಗಾಗಲೇ ನಾವು ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಇವುಗಳಲ್ಲಿ ಸರಿಸುಮಾರು 90 ಪ್ರತಿಶತದಷ್ಟು ಸಸಿಗಳು ಉಳಿದುಕೊಂಡಿವೆ, ಹಾಳಾದ ಸಸಿಗಳ ಸ್ಥಳಗಳಲ್ಲಿ ಹೊಸ ಸಸಿಗಳನ್ನು ನೆಡುತ್ತೇವೆ” ಸಸಿಗಳನ್ನು ನೆಡಲು ಗಾರ್ಡ್ಗಳನ್ನು ನೇಮಿಸಲಾಗುವುದು. ಅವರು ಮೂರು ವರ್ಷಗಳ ಕಾಲ ನೀರು ಹಾಕುವ ಮತ್ತು ಗಿಡಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw