ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು - Mahanayaka
3:40 PM Thursday 15 - January 2026

ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು

eduki
25/04/2022

ಇಡುಕ್ಕಿ: ಪ್ರೆಶರ್ ಕುಕ್ಕರ್ ಸ್ಫೋಟಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಇಡುಕ್ಕಿಯ ಕಟ್ಟಪ್ಪನ ಬಳಿಯ ಪೂರ್ ಮೌಂಟ್ ನಲ್ಲಿ ನಡೆದಿದೆ.  ಮೃತರನ್ನು ಪವರ್ಸ್ ಮೌಂಟ್‌ ನ ಶಿಬು ಡೇನಿಯಲ್ (39) ಎಂದು ಗುರುತಿಸಲಾಗಿದೆ.

ಪತ್ನಿ ಗರ್ಭಿಣಿಯಾಗಿರುವ ಕಾರಣ ಶಿಬು ಕಳೆದ ಕೆಲ ದಿನಗಳಿಂದ ಅಡುಗೆ ಕೆಲಸ ಮಾಡುತ್ತಿದ್ದಾನೆ.  ಬೆಳಗಿನ ಉಪಾಹಾರ ತಯಾರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.  ಕುಕ್ಕರ್ ನ ಮುಚ್ಚಳ ಶಿಬುವಿನ ತಲೆಗೆ ಅಪ್ಪಳಿಸಿತು.

ಕುಕ್ಕರ್ ಸ್ಫೋಟದ ಸದ್ದು ಕೇಳಿದ ಪತ್ನಿ ಶಿಬು ಗಾಯಗೊಂಡು ಬಿದ್ದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಕಟ್ಟಪ್ಪನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾಗದೆ ಶಿಬು ಮೃತ ಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲೇ ಸಾವು

ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು:  ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ?

ಅಕ್ರಮ ತೈಲ ಸಂಸ್ಕರಣಾಗಾರ  ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ ವೈ ಹೇಳಿದ್ದೇನು?

ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ,  ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆಯಬೇಕು: ಸಿದ್ದರಾಮಯ್ಯ ಕಿಡಿ

 

ಇತ್ತೀಚಿನ ಸುದ್ದಿ