ಬಿಜೆಪಿ ಅಭ್ಯರ್ಥಿಗೆ ಇವಿಎಂ ಮೂಲಕ 5 ಬಾರಿ ಮತದಾನ ಮಾಡಿದ ವಿಡಿಯೋ ವೈರಲ್: ಅಧಿಕಾರಿ ಸಸ್ಪೆಂಡ್ - Mahanayaka

ಬಿಜೆಪಿ ಅಭ್ಯರ್ಥಿಗೆ ಇವಿಎಂ ಮೂಲಕ 5 ಬಾರಿ ಮತದಾನ ಮಾಡಿದ ವಿಡಿಯೋ ವೈರಲ್: ಅಧಿಕಾರಿ ಸಸ್ಪೆಂಡ್

01/05/2024


Provided by

ಬಿಜೆಪಿ ಅಭ್ಯರ್ಥಿಗೆ ಇವಿಎಂ ಮೂಲಕ 5 ಬಾರಿ ಮತದಾನ ಮಾಡಿದ ವಿಡಿಯೋ ವ್ಯಾಪಕವಾಗಿ ಹರಿದಾಡಿದ ಬಳಿಕ ಅಸ್ಸಾಂನ ಪ್ರಿಸೈಡಿಂಗ್ ಆಫೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಅಸ್ಸಾಂನ ಕರಿಂ ಗಂಜ್ ಲೋಕಸಭಾ ಕ್ಷೇತ್ರದ ಪ್ರಿಸೈಡಿಂಗ್ ಆಫೀಸರ್ ನಸ್ರುಲ್ ಹಕ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಏಪ್ರಿಲ್ 26ರಂದು ನಡೆಯುವ ಮತದಾನಕ್ಕಿಂತ ಮುಂಚೆ ಈ ಮೊಕ್ ಮತದಾನ ಪ್ರಕ್ರಿಯೆ ನಡೆದಿತ್ತು. ಮತದಾನ ಕೇಂದ್ರಕ್ಕೆ ಮೊಬೈಲ್ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾರೂ ಕೊಂಡು ಹೋಗಿಲ್ಲ ಎಂಬುದನ್ನು ಖಚಿತಪಡಿಸಬೇಕಾದದ್ದು ಪ್ರಿಸೇಡಿಂಗ್ ಆಫೀಸರ್ ರ ಹೊಣೆಗಾರಿಕೆಯಾಗಿದೆ. ಆದರೆ ಈ ಬಗ್ಗೆ ನಿರ್ಲಕ್ಷ ತೋರಿರುವುದಕ್ಕಾಗಿ ನಸ್ರುಲ್ಹಕ್ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪಕ್ಷೇತರ ಅಭ್ಯರ್ಥಿ ಅಬ್ದುಲ್ ಹಮೀದ್ ಅವರ ಪೋಲಿಂಗ್ ಏಜೆಂಟ್ ಆಗಿರುವ ಅಬ್ದುಲ್ ಸಾಹೇಬ್ ಬಿಜೆಪಿ ಅಭ್ಯರ್ಥಿಗೆ ಬೆನ್ನು ಬೆನ್ನಿಗೆ ಐದು ಬಾರಿ ಮತ ಚಲಾಯಿಸುವುದು ಕಾಣಿಸುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ