ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ! - Mahanayaka
11:49 PM Tuesday 20 - January 2026

ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!

bihar crime news
25/07/2021

ಮುಝಾಫರ್ ನಗರ್: ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಮಾರಣಾಂತಿಕವಾಗಿ ಥಳಿಸಿ, ಆತನ ಮರ್ಮಾಂಗವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಅಮಾವೀಯ ಘಟನೆ ಬಿಹಾರದ ಮುಜಾಫರ್ ಜಿಲ್ಲೆಯ ಕಾಂತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೆಪುರರಾಮಪುರ್ಷನ್ ಗ್ರಾಮದ 17 ವರ್ಷ ವಯಸ್ಸಿನ ಸೌರಭ್ ಕುಮಾರ್ ಹತ್ಯೆಗೀಡಾದ ಅಪ್ರಾಪ್ತ ವಯಸ್ಕನಾಗಿದ್ದು,  ಪಕ್ಕದ ಸೊರ್ಬರ ಗ್ರಾಮದಲ್ಲಿರುವ ತನ್ನ ಪ್ರೇಯಸಿಯ ಮನೆಗೆ  ಹೋಗಿದ್ದ, ಈ ವೇಳೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಆತನನ್ನು ಹಿಡಿದ ಗ್ರಾಮಸ್ಥರು ಹಾಗೂ ಪ್ರೇಯಸಿಯ ಮನೆಯವರು ಅಮಾನವೀಯವಾಗಿ ಥಳಿಸಿ, ಆತನ ಮರ್ಮಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಮುಖ್ಯಾಧಿಕಾರಿ ರಾಜೇಶ್ ಕುಮಾರ್,  ಬಾಲಕನನ್ನು ಮಾರಣಾಂತಿಕವಾಗಿ ಥಳಿಸಿದ್ದ ಹುಡುಗಿಯ ಸಂಬಂಧಿಕರು, ಸೌರಭನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಉಳಿದ ಗಾಯಗಳ ಬಗ್ಗೆ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ಸೌರಭ್ ಹತ್ಯೆಯಿಂದ ರೊಚ್ಚಿಗೆದ್ದ ರೆಪುರ ರಾಂಪುರಷ ಗ್ರಾಮಸ್ಥರು, ಸೊರ್ಬರ ಗ್ರಾಮದಲ್ಲಿನ ಹುಡುಗಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಕುಟುಂಬದ ಸದಸ್ಯರು ಪರಾರಿಯಾಗಿದ್ದಾರೆ. ಕೊಲೆಯಾದ ಸೌರಭ್‍ ನ ಶವವನ್ನು ಹುಡುಗಿಯ ಮನೆಯ ಮುಂದೆಯೇ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಶಾಂತ್ ಪಾಂಡೆ ಯಾನೆ ವಿಜಯ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿದ್ದಕ್ಕಾಗಿ ಸೌರಭ್ ಕುಟುಂಬಸ್ಥರ ಮೇಲೆಯೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿದೆ.

ಇತ್ತೀಚಿನ ಸುದ್ದಿ