ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ!

ಪ್ರೇಯಸಿಯೊಂದಿಗೆ ಜಗಳವಾಡಿ, ಆಕೆಯ ಕೈಕಾಲು ಕಟ್ಟಿ ಹಾಕಿ ಸೂಟ್ ಕೇಸ್ ನಲ್ಲಿ ಜೀವಂತವಾಗಿ ತುಂಬಿಸಿ ಕಾಡಿನಲ್ಲಿ ಎಸೆದಿದ್ದ. ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನ್ಯೂಯಾರ್ಕ್ನ ವೈಟ್ ಪ್ಲೇನ್ಸ್ ನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ವಿನ್ಸೆಂಟ್ ಬ್ರಿಚೆಟ್ಟಿ ಪ್ರಕಟಿಸಿದ್ದಾರೆ.
26 ವರ್ಷ ವಯಸ್ಸಿನ ಜೇವಿಯರ್ ಡಾ.ಸಿಲ್ವಾ ಈ ಶಿಕ್ಷೆಗೆ ಗುರಿಯಾದವನಾಗಿದ್ದು, 2019ರಲ್ಲಿ ಈತ ಮಾಡಿದ್ದ ಕೃತ್ಯಕ್ಕೆ ಶಿಕ್ಷೆ ನೀಡಲಾಗಿದೆ. ಬುಕ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ವ್ಯಾಲೆರಿ ರೆಯೆಸ್ ಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಡಾ.ಸಿಲ್ವಾ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.
ಡಾ ಸಿಲ್ವಾ ಒಬ್ಬ ಸ್ವಾರ್ಥಿ, ಆಸೆಬುರುಕ ಎಂದು ರೆಯೆಸ್ ಳ ತಾಯಿ ಕೂಡ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದರು. ಡಾ.ಸಿಲ್ವಾ, ತನಗೂ ಮತ್ತು ರೆಯೆಸ್ ಗೂ ಸಂಬಂಧವಿತ್ತು. ಆದರೆ ಬ್ರೇಕ್ ಅಪ್ ಆಗಿತ್ತು. ಅದಾದ 9 ತಿಂಗಳ ನಂತರ ಅವಳ ಅಪಾರ್ಟ್ಮೆಂಟ್ ನಲ್ಲೇ ನಮ್ಮಿಬ್ಬರಿಗೂ ಸಿಕ್ಕಾಪಟೆ ಜಗಳ ನಡೆದಿರುವುದು ನಿಜ ಎಂದು ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದ. ಜಗಳದ ಬಳಿಕ ಸೂಟ್ ಕೇಸ್ ನಲ್ಲಿ ರೆಯೆಸ್ ಳನ್ನು ತುಂಬಿ ಗ್ರೀನ್ ವಿಚ್ ಕಾಡಿನಲ್ಲಿ ಎಸೆದಿದ್ದ. ಅದು ಒಂದು ವಾರದ ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಅದಾಗಲೇ ರೆಯೆಸ್ ಉಸಿರುಕಟ್ಟಿ ಮೃತಪಟ್ಟಿದ್ದಳು.
ಪ್ರಕರಣ ದಾಖಲಾದ ಬಳಿಕ ಡಾ.ಸಿಲ್ವಾ, ರೆಯೆಸ್ ತಾಯಿ ಎದುರು ಬಂದು ಕಣ್ಣೀರು ಹಾಕಿ ಕ್ಷಮೆ ಕೇಳಿದ್ದ. ಈ ವಿಚಾರವನ್ನು ಕೋರ್ಟ್ ನಲ್ಲಿ ಸಿಲ್ವಾ ಲಾಯರ್ ಬಲವಾಗಿ ವಾದಿಸಿದ್ದರು. ಆತ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡುತ್ತಿದ್ದಾನೆ. ಅವರಿಗೆ ಕ್ಷಮೆ ನೀಡಬೇಕು ಎಂದು ಕೋರಿದ್ದರು.
ಆದರೆ, ಡಾ.ಸಿಲ್ವಾನ ಲಾಯರ್ ನ ವಾದವನ್ನು ಪ್ರಾಸಿಕ್ಯೂಟರ್ ಒಪ್ಪಲಿಲ್ಲ. ಯುವತಿಯನ್ನು ಸೂಟ್ ಕೇಸ್ ನಲ್ಲಿ ಹಾಕುವಾಗ ಆತ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ, ಆಕೆಯದ್ದೇ ಡೆಬಿಟ್ ಕಾರ್ಡ್ ಬಳಸಿ 5000 ಡಾಲರ್ ಗಳಷ್ಟು ಹಣ ವಿತ್ ಡ್ರಾ ಮಾಡಿದ್ದಾನೆ. ಅವಳ ಐಪ್ಯಾಡ್ ಕೂಡ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಧೀಶರಿಗೆ ಹೇಳಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಮಾಲಿಕ ಸಹಿತ ಮೂವರು ಅರೆಸ್ಟ್
ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ | ಮಮತಾ ಬ್ಯಾನರ್ಜಿ ಕಿಡಿ
ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ
ಶಾಕಿಂಗ್ ನ್ಯೂಸ್: ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ್ದ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ
ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ | ಆರೋಪಿ ಅರೆಸ್ಟ್
“ಗದ್ದೆ ನೋಡಲು ಹೋಗೋಣ ಬಾ” ಎಂದು ಪತ್ನಿಯನ್ನು ಕರೆದೊಯ್ದು ಹತ್ಯೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ