ಮದ್ಯ ಪ್ರಿಯರಿಗೆ ಶಾಕ್: ಗುರುವಾರದಿಂದಲೇ ಮದ್ಯದ ಬೆಲೆ ಏರಿಕೆ - Mahanayaka

ಮದ್ಯ ಪ್ರಿಯರಿಗೆ ಶಾಕ್: ಗುರುವಾರದಿಂದಲೇ ಮದ್ಯದ ಬೆಲೆ ಏರಿಕೆ

liquor drinking
22/07/2023


Provided by

ಬೆಂಗಳೂರು:  ಬಜೆಟ್ ನಲ್ಲಿ ಮಂಡಿಸಲಾಗಿದ್ದ ಮದ್ಯದ ದರ ಏರಿಕೆಯು ಜುಲೈ 21ರಿಂದಲೇ ಜಾರಿಯಾಗಿದ್ದು, ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಮಂಡಿಸಿದ್ದ ಬಜೆಟ್ ನಲ್ಲಿ  ಮದ್ಯದ ದರ ಏರಿಕೆ ಘೋಷಣೆ ಮಾಡಲಾಗಿತ್ತು. ಐದು ಗ್ಯಾರೆಂಟಿಗಳ ಅನುಷ್ಠಾನಕ್ಕೆ ಬೇಕಾಗಿರುವ ಸಂಪನ್ಮೂಲ ಸಂಗ್ರಹಿಸಲು ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ. 20ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.10ಕ್ಕೆ ಏರಿಕೆ ಮಾಡಲಾಗಿದೆ. ಮಿಲಿಟರಿ ಕ್ಯಾಂಟೀನ್ ಹೊರತುಪಡಿಸಿ ಉಳಿದೆಲ್ಲ ಮದ್ಯದಂಗಡಿಗಳಿಗೂ ಈ ಪರಿಷ್ಕೃತ ದರ ಅನ್ವಯವಾಗಲಿದೆ.

2020ರಿಂದ ಜಾರಿಯಲ್ಲಿರುವ ದರಕ್ಕೆ ಹೋಲಿಸಿದ್ರೆ ಪ್ರತಿ ಪೆಟ್ಟಿಗೆಗೆ ರೂಪಾಯಿ 449 ಘೋಷಿತ ದರ ಹೊಂದಿರುವ ಬಲ್ಕ್ ಲೀಟರ್ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯಲ್ಲಿ ರೂ.55ರಷ್ಟು ಹೆಚ್ಚಳವಾಗಿದೆ. ಒಟ್ಟು 18 ಸ್ಲ್ಯಾಬ್ ಗಳಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆ ಮಾಡಲಾಗಿದೆ. ಕೊನೆಯ ಹಂತದಲ್ಲಿ ಪ್ರತಿ ಬಲ್ಕ್ ಲೀಟರ್ ಗೆ 15,001 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಘೋಷಿತ ದರ ಹೊಂದಿರುವ ಮದ್ಯದ ಪೆಟ್ಟಿಗೆ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯಲ್ಲಿ 893ರೂಪಾಯಿಗಳಷ್ಟು ಹೆಚ್ಚಳವಾಗಲಿದೆ.

ಇನ್ನೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಪ್ರಮಾಣ ಶೇ.175ರಷ್ಟು ಇತ್ತು, ಅದನ್ನು ಶೇ.185ಕ್ಕೆ ಏರಿಕೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ