ಟರ್ಕಿಯಿಂದ ವ್ಯಾಪಾರ ಸಂಬಂ‍ಧ ಕಡಿತ: ಇಸ್ರೇಲ್ ನಲ್ಲಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆ - Mahanayaka
11:55 PM Wednesday 15 - October 2025

ಟರ್ಕಿಯಿಂದ ವ್ಯಾಪಾರ ಸಂಬಂ‍ಧ ಕಡಿತ: ಇಸ್ರೇಲ್ ನಲ್ಲಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆ

15/08/2024

ಇಸ್ರೇಲ್ ನಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಇಸ್ರೇಲಿ ಪ್ರಮುಖ ಪತ್ರಿಕೆಯೊಂದು ಹೇಳಿದೆ. ಮುಖ್ಯವಾಗಿ ಇಸ್ರೇಲ್ ಜೊತೆಗಿನ ಎಲ್ಲಾ ವ್ಯಾಪಾರ ಸಂಬಂಧವನ್ನು ಮೇ 2ರಂದು ಟರ್ಕಿಯು ಬಾಯ್ ಕಾಟ್ ಮಾಡಿರುವುದರಿಂದ ಈ ಬೆಲೆ ಏರಿಕೆ ಉಂಟಾಗಿದೆ ಎಂದು ಪತ್ರಿಕೆ ತಿಳಿಸಿದೆ.


Provided by

ಹಾಗೆಯೇ ಜೋರ್ಡಾನ್ ನಿಂದ ತರಕಾರಿಗಳನ್ನು ಆಮದು ಮಾಡುವುದಕ್ಕೆ ಇಸ್ರೇಲ್ ನ ಸಚಿವಾಲಯ ನಿರ್ಬಂಧ ಹೇರಿದೆ.. ಅಲ್ಲಿ ಕೊಲೆರ ಬ್ಯಾಕ್ಟೀರಿಯ ಕಾಣಿಸಿಕೊಂಡ ಕಾರಣಕ್ಕಾಗಿ ಈ ನಿರ್ಬಂಧ ವಿಧಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಟರ್ಕಿ ಮತ್ತು ಜೋರ್ಡಾನ್ ನಿಂದ ಆಮದು ಮಾಡಲಾಗುವ ತರಕಾರಿಗಳೇ ಇಸ್ರೇಲ್ ನ ಪಾಲಿಗೆ ಬಹು ಮುಖ್ಯ ಬೇಡಿಕೆಯನ್ನು ಈಡೇರಿಸುತ್ತಿತ್ತು. ಹಾಗೆಯೇ ಈ ಬಾರಿ ಇಸ್ರೇಲ್ ನಲ್ಲಿ ತರಕಾರಿ ಬೆಳೆಯಲ್ಲಿ ಬಾರಿ ಕುಸಿತ ಉಂಟಾಗಿರುವುದು ಕೂಡ ಅಭಾವಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ತರಕಾರಿಯನ್ನು ಬೆಳೆಯುವುದು ಭಾರಿ ವೆಚ್ಚದಾಯಕವಾಗಿದ್ದು ಇಸ್ರೇಲಿ ಸಚಿವಾಲಯ ಬೆಳೆಗಾರರಿಗೆ ವಿಶೇಷ ಸಬ್ಸಿಡಿಯನ್ನು ನೀಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ