PUCಯಿಂದ ಪದವಿ ಓದುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 35,000ರೂ. ಪ್ರೋತ್ಸಾಹ ಧನ
ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವಂತೆ 35,000 ರೂಪಾಯಿವರೆಗೆ ಪ್ರೋತ್ಸಾಹ ಧನವನ್ನು ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಕರೆದಿದೆ.
Prize Money Scholarship ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅವಶ್ಯಕತೆ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳಿ.
Prize Money Scholarship For Application: ವಿದ್ಯಾರ್ಥಿ ವೇತನದ ಸಂಕ್ಷಿಪ್ತ ವಿವರ :
* ಪ್ರೋತ್ಸಾಹ ಧನ ನೀಡುತ್ತಿರುವ ಇಲಾಖೆ: ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
* ಅರ್ಜಿ ಸಲ್ಲಿಸುವುದು : ಆನ್ಲೈನ್
* ಪ್ರೋತ್ಸಾಹ ಧನದ ಮೊತ್ತ : ₹35,000 ರೂಪಾಯಿಯವರೆಗೆ
ಯಾವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ?
ಕರ್ನಾಟಕ ಸರ್ಕಾರದ ಅಡಿಯಲ್ಲಿರುವಂತಹ ಈ ಯೋಜನೆಗೆ ಅರ್ಜಿ ಸಲ್ಲಿಸಲು, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದಂತಹ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದಂತಹ ವಿದ್ಯಾರ್ಥಿಗಳು ಮೊದಲನೆಯ ಪ್ರಯತ್ನದಲ್ಲಿಯೆ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು 2024ನೇ ಸಾಲಿನಲ್ಲಿ ಮುಗಿಸಿದ್ದವರು ಈ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
SC ST Prize Money Scholarship 2024: ಯಾರಿಗೆ ಎಷ್ಟು ರೂಪಾಯಿ ಪ್ರೋತ್ಸಾಹ ಧನ ಮೊತ್ತ ಸಿಗಲಿದೆ?
ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕೋರ್ಸ್ ಗೆ ಅನುಗುಣವಾಗಿ ಈ ಕೆಳಗಿನಂತೆ ಪ್ರೋತ್ಸಾಹಧನವನ್ನು ಸರ್ಕಾರವು ನೀಡುತ್ತದೆ.
* ದ್ವಿತೀಯ ಪಿಯುಸಿ ಹಾಗೂ ಮೂರು ವರ್ಷದ ಡಿಪ್ಲೋಮಾ ಮುಗಿಸಿದವರಿಗೆ – 20,000ರೂಪಾಯಿ
* ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ – ₹25,000 ರೂಪಾಯಿ
* ಸ್ನಾತಕೋತ್ತರ ಪದವಿ ಮುಗಿಸಿದವರಿಗೆ – ₹30,0000 ರೂಪಾಯಿ
* ವೃತ್ತಿಪರ ಪದವಿ ಮುಗಿಸಿದವರಿಗೆ – ₹35,000 ರೂಪಾಯಿ
ವಿದ್ಯಾರ್ಥಿ ವೇತನ ಪಡೆಯಲು ಬೇಕಾಗಿರುವ ಅಗತ್ಯ ದಾಖಲಾತಿಗಳು:
ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ವರ್ಗಗಳ ಕಲ್ಯಾಣ ಇಲಾಖೆಯ ಈ ಒಂದು ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 10ನೇ ತರಗತಿ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ ಹಾಗೂ ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನು ನಿಗದಿಪಡಿಸಲಾಗಿಲ್ಲ. ಇಲಾಖೆಗಳು ನಿಗದಿಪಡಿಸಿದ ನಂತರ ಶೀಘ್ರದಲ್ಲಿ ನಿಮಗೆ ತಿಳಿಸಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗಿನಿಂದಲೇ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ ಬೇಗನೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇಲಾಖೆಯ ಪ್ರಮುಖ ಲಿಂಕುಗಳು:
* ಪರಿಶಿಷ್ಟ ಜಾತಿಯವರ ಅರ್ಜಿ ಸಲ್ಲಿಸುವ ಲಿಂಕ್ : https://swdservices.karnataka.gov.in/SWPRIZEMONEY/Home.aspx?ReturnUrl=%2fswprizemoney%2f
* ಪರಿಶಿಷ್ಟ ಪಂಗಡದವರಿಗೆ ಅರ್ಜಿ ಸಲ್ಲಿಸಬೇಕಾಗಿರುವ ಲಿಂಕ್ :
https://twd.karnataka.gov.in/TWPostprizemoney/Home.aspx?ReturnUrl=%2fswprizemoney%2f
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97




























