ನಟ ಉಪೇಂದ್ರ ಭಾವಚಿತ್ರಕ್ಕೆ ಎಲೆ ಅಡಿಕೆ ಜಗಿದು ಉಗುಳಿದ ದಲಿತ ಪರ ಹೋರಾಟಗಾರರು!
24/08/2023
ಚಾಮರಾಜನಗರ: ದಲಿತ ಸಮುದಾಯ ಬಗ್ಗೆ ಚಿತ್ರನಟ ಉಪೇಂದ್ರ ಅವಹೇನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕೊಳ್ಳೇಗಾಲ ತಾಲೂಕು ಕಚೇರಿ ಮುಂಭಾಗ ಕಳೆದ 3 ದಿನಗಳಿಂದ ಆದಿ ದ್ರಾವಿಡ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಭಾವಚಿತ್ರಕ್ಕೆ ಉಗಿಯುವ ಮೂಲಕ ಉಪೇಂದ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.
ನಟ ಉಪೇಂದ್ರ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿ ಉಗಿಯುವ ಮೂಲಕ ದಲಿತ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಷ ನಟ ಉಪೇಂದ್ರ ಅವರನ್ನು ಬಂಧಿಸಬೇಕು ಇಲ್ಲವಾದಲ್ಲಿ ನಿರಂತರವಾಗಿ ಬೇರೆಬೇರೆ ರೀತಿಯಲ್ಲಿ ಬಂಧನವಾಗುವ ತನಕ ಪ್ರತಿಭಟಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಭರದಲ್ಲಿ ನಾಣ್ಣುಡಿ ಉಲ್ಲೇಖಿಸಿದ್ದು ನಟನಿಗೆ ಮುಳುವಾಗಿ ಪರಿಣಮಿಸಿದ್ದು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಬಂಧನಕ್ಕೆ ಆಗ್ರಹಿಸುತ್ತಿವೆ.




























